Wednesday, June 3, 2026
Homeತಾಜಾ ಸುದ್ದಿಪುತ್ತೂರು : ನಾಪತ್ತೆಯಾಗಿದ್ದ ರಿಕ್ಷಾ ಚಾಲಕನ ಮೃತದೇಹ ರಿಕ್ಷಾದಲ್ಲಿ ಪತ್ತೆ

ಪುತ್ತೂರು : ನಾಪತ್ತೆಯಾಗಿದ್ದ ರಿಕ್ಷಾ ಚಾಲಕನ ಮೃತದೇಹ ರಿಕ್ಷಾದಲ್ಲಿ ಪತ್ತೆ

- Advertisement -
- Advertisement -

ಪುತ್ತೂರು: ಬಲ್ನಾಡು ಉಜ್ರುಪಾದೆ ನಿವಾಸಿ ಆಟೋ ರಿಕ್ಷಾ ಚಾಲಕ ಸುಂದರ ಪಿ ಅವರು ಮೊಬೈಲ್ ಮತ್ತು ರ‍್ಸ್ ಮನೆಯಲ್ಲೇ ಬಿಟ್ಟು ತನ್ನ ರಿಕ್ಷಾದಲ್ಲಿ ಬಾಡಿಗೆಗೆಂದು ಹೋಗಿದ್ದು, ಅವರ ಮೃತ ದೇಹ ಬಲ್ನಾಡಿನ ಮಚ್ಚಿಮಲೆ ಬೊಲ್ದಾಣ ರಸ್ತೆಯ ಮಧ್ಯೆ ರಿಕ್ಷಾದಲ್ಲಿ ಫೆ. 16ರಂದು ಬೆಳಿಗ್ಗೆ ಪತ್ತೆಯಾಗಿದೆ.


ಸುಂದರ ಅವರು ಮನೆಯಿಂದ ಅವರು ಫೆ.13 ರಂದು ಆಟೋ ರಿಕ್ಷಾದಲ್ಲಿ ಬಾಡಿಗೆಗಾಗಿ ತೆರಳಿದ್ದರು. ಆದರೆ ಮನೆಗೆ ಬಾರದ ಸುಂದರ ಅವರಿಗೆ ಮೊಬೈಲ್ ಪೋನ್ ಕರೆ ಮಾಡಿದಾಗ ಅವರ ಮೊಬೈಲ್ ಮನೆಯಲ್ಲೇ ಇರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಸುಂದರ ಅವರ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.

ಇದೀಗ ಸುಂದರ ಅವರ ಮೃತ ದೇಹ ಅವರ ರಿಕ್ಷಾದಲ್ಲೇ ಪತ್ತೆಯಾಗಿದೆ.

- Advertisement -

Latest News

error: Content is protected !!