Friday, June 5, 2026
Homeಕರಾವಳಿಕಾಸರಗೋಡು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರ ಬಂಧನ - 46 ಕಿಲೋ ಗಾಂಜಾ ವಶ...

ಕಾಸರಗೋಡು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರ ಬಂಧನ – 46 ಕಿಲೋ ಗಾಂಜಾ ವಶ !

- Advertisement -
- Advertisement -

ಕಾಸರಗೋಡು: ಗಾಂಜಾ ದಂಧೆ ಆರೋಪದ ಮೇಲೆ ಕಾಸರಗೋಡು ಡಿವೈಎಸ್‌ಪಿ ಬಾಲಕೃಷ್ಣ ನಾಯರ್ ಮತ್ತು ಇತರ ಪೊಲೀಸ್ ಸಿಬ್ಬಂದಿಗಳು ಮೂವರನ್ನು ಬಂಧಿಸಿದ್ದಾರೆ. ಕಾಸರಗೋಡಿನ ಚೌಕಿ ಕಾವುಗೋಳಿ ಮತ್ತು ಬದಿಯಡ್ಕದ ಕನ್ಯಾಪಾಡಿಯಲ್ಲಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ನೆಲ್ಲಿಕಟ್ಟೆಯ ಅಮೂಸನಗರದ ಅಬ್ದುಲ್ ರೆಹಮಾನ್ (52), ನಾಯಮರಮೂಲೆ ಪೆರುಂಬಳದ ಸಿ ಎ ಅಹಮ್ಮದ್ ಕಬೀರ್ (40) ಮತ್ತು ಆಡೂರಿನ ಕುಂಟಾರುವಿನ ಕೆಪಿ ಮಹಮ್ಮದ್ ಹ್ಯಾರಿಸ್ (36) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕಾವುಗೋಳಿಯಲ್ಲಿ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ಮೂವರನ್ನು ತಡೆದು 23.300 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕನ್ಯಾಪಾಡಿಯ ಕ್ವಾರ್ಟರ್‌ನಲ್ಲಿ ಗಾಂಜಾ ಶೇಖರಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಪೊಲೀಸರು ದಾಳಿ ನಡೆಸಿದಾಗ ಘಟನಾ ಸ್ಥಳದಿಂದ 22.900 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!