Wednesday, July 15, 2026
Homeಅಪರಾಧವಿಟ್ಲ: ಪ್ರೇಯಸಿ ಭೇಟಿಗೆ ಬಂದ ಪ್ರಿಯಕರನ ಮೇಲೆ ಆಕೆಯ ಮನೆಯವರಿಂದ ಹಲ್ಲೆ; ನಾಲ್ವರ ವಿರುದ್ಧ ಪ್ರಕರಣ...

ವಿಟ್ಲ: ಪ್ರೇಯಸಿ ಭೇಟಿಗೆ ಬಂದ ಪ್ರಿಯಕರನ ಮೇಲೆ ಆಕೆಯ ಮನೆಯವರಿಂದ ಹಲ್ಲೆ; ನಾಲ್ವರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ವಿಟ್ಲ: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಭೇಟಿಮಾಡಿ, ಮಾತನಾಡಿಸಲೆಂದು ಬಂದ ಪ್ರಿಯಕರ ಸಮೀರ್ ಮತ್ತು ಆತನ ಸ್ನೇಹಿತರಿಗೆ ಯುವತಿಯ ತಂದೆ ಅಣ್ಣ ಮತ್ತು ಸಂಭoದಿಕರು ಸೇರಿ ಹಲ್ಲೆ ನಡೆಸಿದ ಪ್ರಕರಣ ನಡೆದಿದೆ.


ಜ. 17 ರಂದು ಮಧ್ಯಾಹ್ನ ಆಶಿಕ್ ತನ್ನ ಸ್ನೇಹಿತ ಸಮೀರ್‌ನನ್ನು ಸ್ಕೂಟರ್‌ನಲ್ಲಿ ಬಂಟ್ವಾಳ ತಾಲೂಕು ಗ್ರಾಮದಲ್ಲಿ ಬಿಟ್ಟು, ಪಾಪಾಸು ಕರೆದುಕೊಂಡು ಹೋಗಲು ರಸ್ತೆಬದಿಯಲ್ಲಿ ಕಾಯುತ್ತಿರುವಾಗ, ಅಲ್ಲಿಗೆ ಬಂದ ಪ್ರಿಯತಮೆಯ ತಂದೆ ಮತ್ತು ಅಣ್ಣಂದಿರು ಆತನನ್ನು ತಡೆದು ಅವಾಚ್ಯ ಶಬ್ದಗಳಿಂದ ಮಾತನಾಡಿ ಜೊತೆಗೆ ಹಲ್ಲೆ ನಡೆಸಿದ್ದು, ಮತ್ತೊಮ್ಮೆ ನೀನು ಇಲ್ಲಿಗೆ ಬಂದರೆ ನಿನ್ನನ್ನು ಕೊಚ್ಚಿ ಹಾಕುತ್ತೇವೆ ಎಂದು ಎಂದು ಜೀವ ಬೆದರಿಕೆ ಹಾಕಿದ್ದಾರೆ, ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿರುವ ನಾಲ್ವರ ವಿರುದ್ಧ ದೂರು ನೀಡಿದ್ದು, ಬಾಂಪ ಕುಂಇ, ಹಕೀಮ್, ಹಂಝ, ಆಶ್ರಫ್ಫ್ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೂಲತಃ ಕೋಲ್ಪೆ ಸಮೀಪದ ಯುವಕನಾದ ಸಮೀರ್ ಮತ್ತು ಆತನ ಸ್ನೇಹಿತ ಆಶಿಕ್ ವಿಟ್ಲ ಹೇಮಾಜೆ ಸಮೀಪದಲ್ಲಿರುವ ಪ್ರಿಯತಮೆಯ ಮನೆಗೆ ಮಾತನಾಡಿಸಲು ಬರುವ ಕ್ಷಣದಲ್ಲಿ ಆಕೆಯ ಮನೆಯವರು ಸ್ಥಳಕ್ಕೆ ಧಾವಿಸಿ ಯುವಕನ್ನು ತಡೆಗಟ್ಟಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ, ಎಂದು ಆರೋಪಿಸಲಾಗಿದೆ.


ಈ ಘಟನೆಯಿಂದ ಹಲ್ಲೆಗೊಳಗಾದ ಆಶಿಕ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!