Sunday, June 7, 2026
Homeಕರಾವಳಿಉಡುಪಿಕಾಪು: ಫ್ಲೈಓವರ್‌‌ನಲ್ಲಿ ಟಯರ್ ಸಿಡಿದು ಟೆಂಪೋ ಪಲ್ಟಿ

ಕಾಪು: ಫ್ಲೈಓವರ್‌‌ನಲ್ಲಿ ಟಯರ್ ಸಿಡಿದು ಟೆಂಪೋ ಪಲ್ಟಿ

- Advertisement -
- Advertisement -

ಕಾಪು: ಕಾಪು ರಾಷ್ಟ್ರೀಯ ಹೆದ್ದಾರಿ 66ರ ಫ್ಲೈ ಓವರ್‌‌ನಲ್ಲಿ, ಅಡಿಕೆ ಸಾಗಾಟದ ಟೆಂಪೋವೊಂದು ಟಯರ್‌‌ ಸಿಡಿದು ಉರುಳಿ ಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ಟೆಂಪೋ ಚಾಲಕ ಹಾಗೂ ನಿರ್ವಾಹಕರಿಗೆ ಯಾವುದೇ ರೀತಿಯಾದ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಮಂಗಳೂರಿಗೆ ಸಿದ್ದಾಪುರದಿಂದ ಅಡಿಕೆ ಸಾಗಾಟ ಮಾಡುತ್ತಿದ್ದ ಟೆಂಪೋದ ಟಯರ್‌‌‌ ಮಾರ್ಗ ಮಧ್ಯೆ ಒಡೆದಿದ್ದು, ಈ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಫ್ಲೈಓವರ್‌‌ನಲ್ಲಿ ಉರುಳಿ ಬಿದ್ದಿದೆ.

ಇದರ ಪರಿಣಾಮ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!