Wednesday, June 3, 2026
Homeಕರಾವಳಿಬೆಳ್ತಂಗಡಿ : ಕಿಲ್ಲೂರು ಮಸೀದಿಯಲ್ಲಿ ಹೊಡೆದಾಟ : ದೂರು ದಾಖಲು

ಬೆಳ್ತಂಗಡಿ : ಕಿಲ್ಲೂರು ಮಸೀದಿಯಲ್ಲಿ ಹೊಡೆದಾಟ : ದೂರು ದಾಖಲು

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಮೋಐದೀನ್ ಜುಮ್ಮಾ ಮಸೀದಿ ಕಿಲ್ಲೂರು ಮಸೀದಿ ವಾರ್ಷಿಕ ಸಭೆಯಲ್ಲಿ ಪರಸ್ಪರ ಜಗಳ ನಡೆದ ಘಟನೆ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ನಾವೂರ ಎರ್ಮಾಳ ನಿವಾಸಿ ಸಿದ್ದಿಕ್ ಹಮೀದ್(41) ಅವರಿಗೆ ಡಿಸೆಂಬರ್ 31 ರಂದು ಕಾರ್ಯಕ್ರಮಕ್ಕೆ ಅಹ್ವಾನವಿದ್ದು, ಮಧ್ಯಾಹ್ನ ಸುಮಾರು 2:30 ಯಿಂದ 3:30 ಕ್ಕೆ ಪರಸ್ಪರ ಜಗಳ ನಡೆಯುತ್ತಿತ್ತು, ಫಿರ್ಯಾದಿದಾರರು ಬಿಡಿಸಲು ಹೋಗಿ ವಾಪಾಸು ಬರುವಾಗ ಆರೋಪಿಗಳಾದ ಅಬ್ದುಲ್‌ ಅಜೀಜ್, ಅಶ್ರಫ್ ಬದ್ರುದ್ದೀನ್ ,ಹನೀಫ್ ಸೇರಿಕೊಂಡು ಸಿದ್ದಿಕ್ ಹಮೀದ್(41) ಅವರನ್ನು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸು ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:341,323,506,504,r/w 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!