Thursday, June 4, 2026
Homeಕರಾವಳಿಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾರ್ಯಲಯ "ಪ್ರೇರಣಾ" ದ ದ್ವಿತೀಯ ವಾರ್ಷಿಕೋತ್ಸವ, ಶ್ರೀ ವಿಶ್ವಪ್ರಸನ್ನ ತೀರ್ಥ...

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾರ್ಯಲಯ “ಪ್ರೇರಣಾ” ದ ದ್ವಿತೀಯ ವಾರ್ಷಿಕೋತ್ಸವ, ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿ

- Advertisement -
- Advertisement -

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಕಾರ್ಯಲಯ ” ಪ್ರೇರಣಾ ” ದ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷರು ಉಳುವಾನ ಶಂಕರ ನಾರಾಯಣ ಭಟ್ ಅಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಕೃಷ್ಣಮೂರ್ತಿ ಅಣ್ಣ , ವಿಶ್ವಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅಣ್ಣ , ವಿಶ್ವಹಿಂದೂ ಪರಿಷತ್ ಮಂಗಳೂರು ವಿಭಾಗ ಮಾತೃಶಕ್ತಿ ಪ್ರಮುಖ್ ಶ್ರೀಮತಿ ಸುರೇಖಾ ರಾಜ್ ಅಕ್ಕ ಧಾರ್ಮಿಕ ಮುಂದಾಳು ವಿಜಯ ಪಂಡಿತ್ ಉಪ್ಪಳ ಅಣ್ಣ , ವಿಕಾಸ್ ಶೆಟ್ಟಿ ಅಣ್ಣ ಮಹಾಲಿಂಗೇಶ್ವರ ಕುಂಜತ್ತೂರು , ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸುಜಾತ ಎಸ್ ಅಕ್ಕ , ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಲ್ಲಂಬೆಟ್ಟು ಅಣ್ಣ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು.

- Advertisement -

Latest News

error: Content is protected !!