- Advertisement -
![]()
- Advertisement -
ಆಲಂಕಾರು : ಖಚಿತ ಮಾಹಿತಿಯ ಮೇರೆಗೆ ಜುಗಾರಿ ಆಟ ಆಡುತ್ತಿದ್ದಲ್ಲಿಗೆ ದಾಳಿ ಮಾಡಿದ ಪ್ರೊಬೇಷನರಿ ಡಿವೈಎಸ್ಪಿ ಧನ್ಯ ನಾಯಕ್ ನೇತೃತ್ವದ ಪೊಲೀಸರು ಐವರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಅಲಂಕಾರು ಗ್ರಾಮದ ಕೆದಿಲ ಎಂಬಲ್ಲಿನ ಗೇರು ಬೀಜ ಅಭಿವೃದ್ಧಿ ನಿಗಮಕ್ಕೆ ಸಂಬಂದಪಟ್ಟ ಗೇರು ತೋಟದಲ್ಲಿ ಇಸ್ಪೀಟ್ ಎಲೆಗಳಿಂದ ಅಂದರ್ -ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದರು .
5 ಜನ ಆರೋಪಿತರಾದ ಜಗದೀಶ ರಾಧಾಕೃಷ್ಣ , ತಿಮ್ಮಪ್ಪ ಮುಗೇರ , ರಘುರಾಮ ಗೌಡ ಲಕ್ಷ್ಮಣಗೌಡ ರವರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಾಗಿದೆ.
ಸುಮಾರು 5 ಪ್ಯಾಕೆಟ್‌ನಲ್ಲಿದ್ದ ಇಸ್ಪೀಟು ಎಲೆಗಳು ಜೂಜಾಟಕ್ಕೆ ಉಪಯೋಗಿಸಿದ 9360 ರೂ ಹಣ , VIVO ಕಂಪನಿಯ Androide ಮೊಬೈಲ್ -01 ಹಾಗೂ ITEL ಕಂಪನಿಯ ಕೀಪ್ಯಾಡ್ ಮೊಬೈಲ್ -01 ಹಾಗೂ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ .
- Advertisement -


