Wednesday, July 2, 2025
Homeಕರಾವಳಿಸುರತ್ಕಲ್: ರಸ್ತೆ ದುರವಸ್ಥೆ ಖಂಡಿಸಿ ಮಹಾನಗರ ಪಾಲಿಕೆಯ ವಿರುದ್ಧ ಪ್ರತಿಭಟನೆ, ಭೂತ ದಹನ..!

ಸುರತ್ಕಲ್: ರಸ್ತೆ ದುರವಸ್ಥೆ ಖಂಡಿಸಿ ಮಹಾನಗರ ಪಾಲಿಕೆಯ ವಿರುದ್ಧ ಪ್ರತಿಭಟನೆ, ಭೂತ ದಹನ..!

spot_img
- Advertisement -
- Advertisement -

ಸುರತ್ಕಲ್, ಕಾನ, ಎಮ್ಆರ್ ಪಿಎಲ್, ಜನತಾ ಕಾಲನಿ ರಸ್ತೆ ದುರವಸ್ಥೆ ಗುಂಡಿಗಳನ್ನು ಮುಚ್ಚದ ಮನಪಾ ಬೇಜವಾಬ್ದಾರಿತನವನ್ನು ಖಂಡಿಸಿ ಕಾನ ಜಂಕ್ಷನ್ ನಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ಮೆರವಣಿಗೆ , ಮನಪಾ ಭೂತ ದಹನ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ , ” ಶಾಸಕ ಭರತ್ ಶೆಟ್ಟಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದರಲ್ಲಿ ವೈಫಲ್ಯ ಕಂಡಿದ್ದಾರೆ. ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರಾಗಿದ್ದ ಹೊಸ ರಸ್ತೆ ನಿರ್ಮಾಣ ಯೋಜನೆ ಭರತ್ ಶೆಟ್ಟಿಯವರ ಬೇಜವಾಬ್ದಾರಿತನದಿಂದ ರದ್ದುಗೊಂಡಿದೆ.

ಸುರತ್ಕಲ್ , ಕೃಷ್ಣಾಪುರ ಮಾರುಕಟ್ಟೆ ಕಾಮಗಾರಿಗಳಿಗೂ ತಡೆ ಬಿದ್ದಿದೆ . ಅಭಿವೃದ್ಧಿ ಕಾರ್ಯ ನಡೆಸಲಾಗದ ಭರತ್ ಶೆಟ್ಟರು ಮತೀಯ ಭಾವನೆಗಳನ್ನು ಕೆರಳಿಸಿ ತನ್ನ ವೈಫಲ್ಯಗಳನ್ನು ಮುಚ್ಚಿಡಲು ನೋಡುತ್ತಿದ್ದಾರೆ.

ರಸ್ತೆ ಅಭಿವೃದ್ಧಿ ಪಡಿಸಲು ಅಸಾಧ್ಯವಾದರೆ ನಾಗರಿಕ ವೇದಿಕೆಯ ಮೂಲಕ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿವೈಎಫ್‌ಐ ಮುಖಂಡರಾದ ಶ್ರೀನಾಥ್ ಕುಲಾಲ್ , ಮನ್ಸೂದ್ ಬಿ ಕೆ , ಅಜ್ರಾಲ್ ಅಹ್ಮದ್ , ಜೋಯ್ ಡಿಸೋಜ , ಮುಹಮ್ಮದ್ , ಜಾಯ್ , ಅಬೂಬಕ್ಕರ್ ಬಾವ , ನವಾಜ್ ಕುಳಾಯಿ ಗಿರೀಶ್ ಜನತಾಕಾಲೊನಿ , ಮೆಹಬೂಬ್ ಖಾನ್ , ಫ್ರಾನ್ಸಿಸ್ ಕಾನ , ಟ್ಯಾಂಕರ್ ಚಾಲಕರ ಸಂಘದ ಅಧ್ಯಕ್ಷರಾದ ಬಾಲು ರಿಕ್ಷಾ ಚಾಲಕರ ಸಂಘದ ಪ್ರಮುಖರಾದ ಹಂಝ , ಇಬ್ರಾಹಿಂ , ಲಕ್ಷ್ಮೀಶ , ಬಶೀರ್ ಮುಂತಾದವರಿದ್ದರು .

- Advertisement -
spot_img

Latest News

error: Content is protected !!