Wednesday, June 3, 2026
Homeಕರಾವಳಿಉಪ್ಪಿನಂಗಡಿ: ಪತಿಯ ಕಿರುಕುಳ ತಾಳಲಾರದೆ ಹೆಂಡತಿ ನೇಣಿಗೆ ಶರಣು !

ಉಪ್ಪಿನಂಗಡಿ: ಪತಿಯ ಕಿರುಕುಳ ತಾಳಲಾರದೆ ಹೆಂಡತಿ ನೇಣಿಗೆ ಶರಣು !

- Advertisement -
- Advertisement -

ಉಪ್ಪಿನಂಗಡಿ : ಕೊಯಿಲ ಗ್ರಾಮದ ಪಟ್ಟೆ ಎಂಬಲ್ಲಿ ಮಹಿಳೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇವರ ಪತಿ ಅಂಗಾರ ವಿಪರೀತ ಮದ್ಯಪಾನ ಸೇವನೆಯ ಚಟ ಹೊಂದಿದ್ದರು ಹಾಗೇ ಪತ್ನಿಗೆ ದೈಹಿಕ ಹಿಂಸೆಯನ್ನು ಕೂಡಾ ನೀಡುತ್ತಿದ್ದರು. ಇದನ್ನು ಸಹಿಸದ ಹರಿಣಿ ಎರಡು ವರ್ಷಗಳಿಂದ ತವರು ಮನೆ ಪರ್ಲಡ್ಕದ ಕೋಡಿಬಾಲ್ ನಲ್ಲಿ ವಾಸವಾಗಿದ್ದರು.

ಆದರೆ ಇತ್ತೀಚೆಗೆ ಮತ್ತೆ ಗಂಡನೊಂದಿಗೆ ವಾಸ ಮಾಡಿಕೊಂಡಿದ್ದು ಮತ್ತೆ ಪತಿಯ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ಸಹೋದರ ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಪಟ್ಟೆ ನಿವಾಸಿ ಅಂಗಾರ ಎಂಬರ ಪತ್ನಿ ಹರಿಣಿ (41) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯೊಳಗಿನ ಕೋಣೆಯಲ್ಲಿ ಛಾವಣಿಯ ಬಿದಿರಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .

- Advertisement -

Latest News

error: Content is protected !!