Thursday, June 4, 2026
Homeಕರಾವಳಿಕಡಬ: ಬ್ಯಾಂಕೊಂದರಲ್ಲಿ ಅಡವಿಟ್ಟ ಕಿವಿಯೋಲೆ ನಾಪತ್ತೆ, ಪೋಲಿಸ್ ದೂರಿನ ಬಳಿಕ ಪತ್ತೆ !

ಕಡಬ: ಬ್ಯಾಂಕೊಂದರಲ್ಲಿ ಅಡವಿಟ್ಟ ಕಿವಿಯೋಲೆ ನಾಪತ್ತೆ, ಪೋಲಿಸ್ ದೂರಿನ ಬಳಿಕ ಪತ್ತೆ !

- Advertisement -
- Advertisement -

ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಪುಷ್ಪಲತಾ ಎಂಬುವರು ಕೆನರಾ ಬ್ಯಾಂಕ್ ನ ಕಡಬ ಶಾಖೆಯಲ್ಲಿ ಒಂದು ಚೈನ್, ಎರಡು ಬಿಳಿ ಕಲ್ಲಿನ ಪ್ಲೇಟ್ ಬೆಂಡು ಹಾಗೂ ಒಂದು ಟಿಕ್ಕಿಯನ್ನು ಭದ್ರತೆಯಾಗಿ ಇಟ್ಟು 32,000. ರೂಪಾಯಿ ಸಾಲವನ್ನು ಪಡೆದಿದ್ದರು ನಂತರ ಅದನ್ನು ಕೇಳಿದಾಗ ಅಡವಿಟ್ಟ ಚಿನ್ನದಲ್ಲಿ ಕಿವಿಯೋಲೆಯೊಂದು ನಾಪತ್ತೆಯಾಗಿತ್ತು.

ಅಡಮಾನವಿಟ್ಟಿರುವಂತಹ ಚಿನ್ನಾಭರಣಗಳು ಒಂದು ವರ್ಷ ದಾಟಿದ ಹಿನ್ನಲೆಯಲ್ಲಿ ಅದನ್ನು ನವೀಕರಣ ಮಾಡುವುದಕ್ಕೆ ಕಡಬದ ಕೆನರಾ ಬ್ಯಾಂಕ್ ಶಾಖೆಗೆ ಹೋದಾಗ ಬ್ಯಾಂಕ್ ಅಧಿಕಾರಿಗಳ ದುರಂಹಕಾರಕ್ಕೆ ಪೊಲೀಸರಿಗೆ ದೂರು ನೀಡಿದ ಬಳಿಕ ಎಚ್ಚೆತ್ತ ಬ್ಯಾಂಕ್ ಈ ಚಿನ್ನವನ್ನು ಇದೀಗ ವಾಪಾಸ್ ನೀಡಿದ್ದಾರೆ.

ಕಿವಿಯೋಲೆ ಕುರಿತು ಅಲ್ಲಿನ ಬ್ಯಾಂಕಿನಲ್ಲಿ ಮತ್ತು ಹಿರಿಯ ಅಧಿಕಾರಿಯವರಿಗೆ ತಿಳಿಸಿದ್ದರೂ ಪ್ರಯೋಜನವಾಗದ ಹಿನ್ನಲೆಯಲ್ಲಿ, ಪೊಲೀಸರಿಗೆ ಇವರು ದೂರು ನೀಡಿದ್ದರು. ಬಳಿಕ ಎಚ್ಚೆತ್ತುಕೊಂಡಂತಹ ಬ್ಯಾಂಕಿನವರು ಚಿನ್ನ ಇದೆ ಎಂದು ಸಮಾಜಾಯಿಷಿ ನೀಡಿ ಕಿವಿಯೋಲೆಯನ್ನು ಇದೀಗ ವಾಪಸು ನೀಡಿದ್ದಾರೆ.

- Advertisement -

Latest News

error: Content is protected !!