Tuesday, June 9, 2026
Homeಕರಾವಳಿಮಂಗಳೂರು: ವಜ್ರದೇಹಿ ಮಠದ ಸ್ವಾಮೀಜಿ ಘೋಷಿಸಿದ ಬಹುಮಾನ ಸ್ವೀಕರಿಸಲು ಪೊಲೀಸ್ ಇಲಾಖೆಗೆ ಅವಕಾಶವಿಲ್ಲ: ಎನ್. ಶಶಿಕುಮಾರ್

ಮಂಗಳೂರು: ವಜ್ರದೇಹಿ ಮಠದ ಸ್ವಾಮೀಜಿ ಘೋಷಿಸಿದ ಬಹುಮಾನ ಸ್ವೀಕರಿಸಲು ಪೊಲೀಸ್ ಇಲಾಖೆಗೆ ಅವಕಾಶವಿಲ್ಲ: ಎನ್. ಶಶಿಕುಮಾರ್

- Advertisement -
- Advertisement -

ಮಂಗಳೂರು: ನಾಗಬನವನ್ನು ಧ್ವಂಸ ಮಾಡಿದ ಪ್ರಯುಕ್ತ ಕೋಡಿಕಲ್ ಪರಿಸರದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿಗಳು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಆರೋಪಿಗಳನ್ನು ಬಂಧಿಸಿದವರಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು ಎಂದು ಹೇಳಿದ್ದರು.

ಸ್ವಾಮೀಜಿ ಘೋಷಿಸಿದ ಬಹುಮಾನ ಸ್ವೀಕರಿಸಲು ನಮ್ಮ ಇಲಾಖೆಯಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಹಾಗೂ ನಾಗಬನ ಅಪವಿತ್ರ ಪ್ರಕರಣದಲ್ಲಿ 8 ಜನರನ್ನು ಬಂಧಿಸಿಲಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ಸಿಬ್ಬಂದಿಯ ಉತ್ತಮ ಕಾರ್ಯ ಗುರುತಿಸಲು ಉತ್ತಮ ಮಾರ್ಗಗಳಿವೆ. ರಾಷ್ಟ್ರಪತಿ ಪದಕ, ಮುಖ್ಯಮಂತ್ರಿ ಪದಕ ಸೇರಿ ಇಲಾಖೆಯಲ್ಲಿ ಹಲವು ಅವಕಾಶ ಇದೆ ಎಂದರು.

ವೈಯುಕ್ತಿಕವಾಗಿ ಯಾರೇ ಬಹುಮಾನ ನಗದು ಸ್ವೀಕರಿಸಲು ಅವಕಾಶ ಇಲ್ಲ. ಹಾಗು ಅದರ ಅವಶ್ಯಕತೆಯೂ ಇಲ್ಲ ನಾವು ಮಾಡುತ್ತಿರುವುದು ಇಲಾಖೆಯ ಕೆಲಸ. ಜನರ ತೆರಿಗೆಯಿಂದ ನಾವು ದುಡ್ಡು ತೆಗೆದುಕೊಳ್ಳುತ್ತೇವೆ ಆದ್ದರಿಂದ ನಿಯತ್ತಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!