Wednesday, June 3, 2026
Homeಇತರಬೆಳ್ತಂಗಡಿ: ಓಮ್ಮಿ ಕಾರು ಮತ್ತು ರಿಟ್ಸ್ ಕಾರು ಮುಖಾಮುಖಿ ಡಿಕ್ಕಿ, ಓಮ್ನಿ ಚಾಲಕನಿಗೆ ಗಂಭೀರ ಗಾಯ

ಬೆಳ್ತಂಗಡಿ: ಓಮ್ಮಿ ಕಾರು ಮತ್ತು ರಿಟ್ಸ್ ಕಾರು ಮುಖಾಮುಖಿ ಡಿಕ್ಕಿ, ಓಮ್ನಿ ಚಾಲಕನಿಗೆ ಗಂಭೀರ ಗಾಯ

- Advertisement -
- Advertisement -

ಬೆಳ್ತಂಗಡಿ: ಓಮ್ಮಿ ಮತ್ತು ಮಾರುತಿ ರಿಟ್ಸ್ ಕಾರುಗಳ ನಡುವೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಓಮ್ನಿ ಕಾರು ಓಡಿಸುತ್ತಿದ್ದ ಚಾಲಕನ ಕಾಲಿಗೆ ಗಂಭೀರ ಗಾಯಗಳಾಗಿವೆ.

ಗೇರುಕಟ್ಟೆ ಸಮೀಪದ ಉದ್ಯಮಿ ಹಾಜಿ ಹೆಚ್ ಉಸ್ಮಾನ್ ರವರು ತಮ್ಮ ಪತ್ನಿಯೊಂದಿಗೆ ಓಮ್ಮಿ ಕಾರಿನಲ್ಲಿ ಜಾರಿಗೆಬೈಲು ಸಮೀಪದ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೇಳೆ ನಾಳ ಸಮೀಪಿಸುತ್ತಿದ್ದಂತೆ, ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಿಸುತ್ತಿದ್ದ ರಿಟ್ಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳ ಮುಂಭಾಗ ಜಖಂಗೊಂಡಿದೆ.

ಕಾರಿನಲ್ಲಿದ ಹಾಜಿ ಉಸ್ಮಾನ್ ರವರ 2 ಕಾಲುಗಳಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ಸಹಕಾರದಿಂದ ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಅವರ ಪತ್ನಿಗೂ ಸಣ್ಣ, ಪುಟ್ಟ ಗಾಯಗಳಾಗಿದೆ.

ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಶಿವರಾಮ ರೈ ಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!