Thursday, June 4, 2026
Homeಕರಾವಳಿಹಲ್ಲೆಗೊಳಗಾದ ಪತ್ರಕರ್ತ ಸುಖ್ ಪಾಲ್ ಪೊಳಲಿಯ ಆರೋಗ್ಯ ವಿಚಾರಿಸಿದ ಸಂಸದ ನಳೀನ್ ಕುಮಾರ್ ಕಟೀಲ್

ಹಲ್ಲೆಗೊಳಗಾದ ಪತ್ರಕರ್ತ ಸುಖ್ ಪಾಲ್ ಪೊಳಲಿಯ ಆರೋಗ್ಯ ವಿಚಾರಿಸಿದ ಸಂಸದ ನಳೀನ್ ಕುಮಾರ್ ಕಟೀಲ್

- Advertisement -
- Advertisement -

ಮಂಗಳೂರು: ಇತ್ತೀಚಿಗೆ ಹಲ್ಲೆಗೊಳಗಾದ ಖಾಸಗಿ ಸುದ್ದಿ ವಾಹಿನಿಯ ವರದಿಗಾರ ಸುಖ್ ಪಾಲ್ ಪೊಳಲಿ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ತಲೆಗೆ ಗಂಭೀರ ಗಾಯವಾಗಿರುವ ಅವರು‌ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಸಂಸದ, ‌ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಸುಖಪಾಲ್ ಅವರ ಆರೋಗ್ಯ ವಿಚಾರಿಸಿದರು. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಏನಿದು ಪ್ರಕರಣ:
ವೃತ್ತಿಯಲ್ಲಿ ವಕೀಲನಾಗಿರುವ ಯದುನಂದನ್ ಎಂಬಾತ ವೈಯಕ್ತಿಕ ವಿಚಾರದ ದ್ವೇಷದ ಹಿನ್ನೆಲೆಯಲ್ಲಿ ರಾಡ್ ನಿಂದ ಸುಖ್ ಪಾಲ್ ಮೇಲೆ ಹಲ್ಲೆ ನಡೆಸಿದ್ದ ಎಂದು ತಿಳಿದುಬಂದಿದೆ. ಆರೋಪಿಯನ್ನು ಭಾರತೀಯ ದಂಡ ಸಂಹಿತೆ 307 ಅಡಿಯಲ್ಲಿ ಉರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ 324 341 ಐಪಿಸಿ ಅಡಿಯಲ್ಲಿ ಪ್ರತಿ ದೂರು ಸಹ ದಾಖಲಿಸಲಾಗಿದೆ.

- Advertisement -

Latest News

error: Content is protected !!