Saturday, June 6, 2026
Homeಕರಾವಳಿನೆಲ್ಯಾಡಿ: ಕೆರೆಯಲ್ಲಿ ತಾವರೆ ಬಿಡಲು ಹೋದ ಕಾಲೇಜು ವಿದ್ಯಾರ್ಥಿನಿ ನೀರುಪಾಲು

ನೆಲ್ಯಾಡಿ: ಕೆರೆಯಲ್ಲಿ ತಾವರೆ ಬಿಡಲು ಹೋದ ಕಾಲೇಜು ವಿದ್ಯಾರ್ಥಿನಿ ನೀರುಪಾಲು

- Advertisement -
- Advertisement -

ನೆಲ್ಯಾಡಿ: ಕೆರೆಯಲ್ಲಿ ತಾವರೆ ಗಿಡ ಬಿಡಲು ಹೋದ ಕಾಲೇಜು ವಿದ್ಯಾರ್ಥಿನಿಯೋರ್ವಳು ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ಇಂದು ನಡೆದಿದೆ.

ಅಂಬರ್ಜೆ ನಿವಾಸಿ ಮೋಹನ-ವಿನೋದ ದಂಪತಿಯ ಪುತ್ರಿ, ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೇಯಾ(18) ಮೃತ ದುರ್ದೈವಿ.

ಮೃತ ಬಾಲಕಿ ತಮ್ಮ ಮನೆಯ ಪರಿಸರದಲ್ಲಿರುವ ಕೆರೆಯಲ್ಲಿ ತಾವರೆ ಗಿಡವನ್ನು ಬಿಡಲು ತೆರಳಿರುವಾಗ ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ. ಮಗಳು ಕೆರೆಯ ಬಳಿ ತೆರಳಿ ಸುಮಾರು ಹೊತ್ತಾದರೂ ಮನೆಗೆ ವಾಪಾಸ್ ಬರದೇ ಇರುವುದನ್ನು ಗಮನಿಸಿದ ಮನೆಯವರು ಕೆರೆಯ ಬಳಿ ಹುಡುಕಿದಾಗ ಕೆರೆಗೆ ಬಿದ್ದು ಮೃತಪಟ್ಟಿರುವುದು ತಿಳಿದುಬಂದಿದೆ.

- Advertisement -

Latest News

error: Content is protected !!