Saturday, September 12, 2026
Homeಕರಾವಳಿಉಡುಪಿ: ಗೋ ಪೂಜೆ ನೆರವೇರಿಸಿ ಸೌಹಾರ್ದತೆಗೆ ಮಾದರಿಯಾದ ಕ್ರೈಸ್ತ ಕುಟುಂಬ!

ಉಡುಪಿ: ಗೋ ಪೂಜೆ ನೆರವೇರಿಸಿ ಸೌಹಾರ್ದತೆಗೆ ಮಾದರಿಯಾದ ಕ್ರೈಸ್ತ ಕುಟುಂಬ!

- Advertisement -
- Advertisement -

ಉಡುಪಿ : ಕರಾವಳಿಯಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಉಡುಪಿಯಲ್ಲಿ ಕ್ರೈಸ್ತ ಕುಟುಂಬವೊಂದು ಗೋ ಪೂಜೆ ಮಾಡುವ ಮೂಲಕ ಮಾದರಿಯಾಗಿದೆ .

ಸ್ಥಳೀಯರ ಜೊತೆಗೂಡಿ ಕಿದಿಯೂರಿನ ಐರಿನ್ ಅಂದ್ರಾದೆಯವರ ಮನೆಯಲ್ಲಿ ಗೋಪೂಜೆ ನಡೆಸಲಾಗಿದೆ. ಆ ಮೂಲಕ ಸೌಹಾರ್ದ ದೀಪಾವಳಿಯನ್ನು ಆಚರಿಸಲಾಗಿದೆ. ಈ ವೇಳೆ ಮಾತನಾಡಿದ ಅವರು, ಹೆತ್ತ ಮಾತೆ ಮಗುವಿಗೆ ತಾತ್ಕಾಲಿಕ ಹಾಲುಣಿಸಿದರೆ ಗೋಮಾತೆ ಎಲ್ಲರಿಗೂ ಬದುಕಿನುದ್ದಕ್ಕೂ ಹಾಲುಣಿಸುವುದರಿಂದ ಮಾತೆಗೂ ಮಿಗಿಲಾದ ಗೋಮಾತೆಯನ್ನು ಪೂಜಿಸುವ ರಕ್ಷಿಸುವ ಹೊಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಅಂದ್ರಾದೆ ಕುಟುಂಬ ಜಾತಿ ಮತ ಮೀರಿ ಸಮಾಜಕ್ಕೆ ಮಾಡುವ ಸಂಸ್ಕಾರಯುತ ಕೆಲಸ ಮಾದರಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಶು ಶೆಟ್ಟಿ ಅಂಬಲಪಾಡಿ ಹೇಳಿದರು . ಸ್ಥಳೀಯರ 4 ಗೋವುಗಳನ್ನು ಅಂದ್ರಾದೆಯವರ ಮನೆಯಲ್ಲಿ ಸಾಮೂಹಿಕವಾಗಿ 30ಕ್ಕೂ ಹೆಚ್ಚು ಗೋ ಭಕ್ತರು ಪೂಜಿಸುವುದರ ಮೂಲಕ ಧನ್ಯರಾದರು. ಗೋಪೂಜೆಯ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

- Advertisement -

Latest News

error: Content is protected !!