Wednesday, June 3, 2026
Homeಅಪರಾಧಪುತ್ತೂರು ಲಾಡ್ಜ್ ನಲ್ಲಿ ಅನ್ಯಕೋಮಿನ ಜೋಡಿ ; ಹಿಂದೂ ಜಾಗರಣ ವೇದಿಕೆಯಿಂದ ಮಾಹಿತಿ!

ಪುತ್ತೂರು ಲಾಡ್ಜ್ ನಲ್ಲಿ ಅನ್ಯಕೋಮಿನ ಜೋಡಿ ; ಹಿಂದೂ ಜಾಗರಣ ವೇದಿಕೆಯಿಂದ ಮಾಹಿತಿ!

- Advertisement -
- Advertisement -

ಪುತ್ತೂರು: ಇಲ್ಲಿನ ವಸತಿಗೃಹವೊಂದರಲ್ಲಿ ಹಿಂದೂ ಯುವತಿ ಮತ್ತು ಅನ್ಯಕೋಮಿನ ವಿವಾಹಿತ ವ್ಯಕ್ತಿಯೊಬ್ಬರು ಇರುವುದರ ಕುರಿತು ಹಿಂದು ಜಾಗರಣ ವೇದಿಕೆ ಪೊಲೀಸರಿಗೆ ಮಾಹಿತಿ ನೀಡಿದ ಮತ್ತು ಪೊಲೀಸರು ಜೋಡಿಗಳಿಬ್ಬರನ್ನು ಠಾಣೆಗೆ ಕರೆದೊಯ್ದ ಘಟನೆ ನ.2ರ ತಡ ರಾತ್ರಿ ನಡೆದಿದೆ.

ವಿವಾಹಿತ ಮುಸ್ಲಿಂ ವ್ಯಕ್ತಿಯೊಂದಿಗೆ ಬೆಂಗಳೂರು ಮೂಲದ ಹಿಂದು ಯುವತಿ ರಾತ್ರಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿರುವ ಮಾಹಿತಿ ಪಡೆದ ಹಿಂಜಾವೇ ಸಂಘಟನೆಯ ಕಾರ್ಯಕರ್ತರು ಅವರನ್ನು ಹಿಂಬಾಲಿಸಿದ್ದಾರೆ. ಯುವತಿ ಮತ್ತು ವ್ಯಕ್ತಿ ವಸತಿ ಗೃಹವೊಂದರಲ್ಲಿ ತಂಗಿರುವ ಕುರಿತು ಖಚಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರು. ಪೊಲೀಸರು ವಸತಿ ಗೃಹಕ್ಕೆ ತೆರಳಿ ಯುವತಿಗೆ ಆಶ್ರಮದಲ್ಲಿಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿ, ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದು ಅವರ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ನ.3ರಂದು ಬೆಳಿಗ್ಗೆ ಯುವತಿ ಮನೆ ಮಂದಿ ಠಾಣೆಗೆ ಬಂದಿರುವುದಾಗಿ ತಿಳಿದು ಬಂದಿದೆ

- Advertisement -

Latest News

error: Content is protected !!