Tuesday, June 9, 2026
Homeಅಪರಾಧಕ್ರೂಸ್ ಡ್ರಗ್ಸ್ ಪ್ರಕರಣ: ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜಾಮೀನು

ಕ್ರೂಸ್ ಡ್ರಗ್ಸ್ ಪ್ರಕರಣ: ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜಾಮೀನು

- Advertisement -
- Advertisement -

ಮುಂಬೈ: ಕ್ರೂಸ್ ಶಿಪ್​​​ನಲ್ಲಿ ಡ್ರಗ್ಸ್​ ಪಾರ್ಟಿ ನಡೆಸಿದ ಆರೋಪದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್​ ತಾರೆ ಶಾರುಖ್​ ಖಾನ್​ರ ಮಗ ಆರ್ಯನ್​ ಖಾನ್​​ಗೆ ಗುರುವಾರ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರ್ಯನ್ ಅವರ ಸ್ನೇಹಿತರಾದ ಅರ್ಬಾನ್ ಮರ್ಚೆಂಟ್, ಮೂನ್ ಮೂನ್ ಗೂ ಜಾಮೀನು ಮಂಜೂರು ಮಾಡಲಾಗಿದೆ.

23 ವರ್ಷದ ಆರ್ಯನ್​ ಖಾನ್​ ಅಕ್ಟೋಬರ್​ 3ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಅಕ್ಟೋಬರ್​ 8ರಿಂದ ಮುಂಬೈನ ಅರ್ಥರ್​ ರಸ್ತೆಯಲ್ಲಿರುವ ಜೈಲಿನಲ್ಲಿದ್ದರು. ಅಂದಿನಿಂದ ಎರಡು ಬಾರಿ ಆರ್ಯನ್​ಗೆ ಜಾಮೀನು ತಿರಸ್ಕರಿಸಲಾಗಿದೆ. ಕೊನೆಗೂ 25 ದಿನಗಳ ಬಳಿಕ ಆರ್ಯನ್​ಗೆ ಜಾಮೀನು ದೊರೆತಿದೆ.

ಆರ್ಯನ್‌ ಖಾನ್‌ ಪರ ಭಾರತದ ಮಾಜಿ ಅಟಾರ್ನಿ ಜನರಲ್‌, ವಕೀಲ ಮುಕುಲ್‌ ರೋಹಟಗಿ ವಾದ ಮಂಡಿಸಿದ್ದರು. ಮಂಗಳವಾರ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ಮೂರು ದಿನಗಳ ವಿಚಾರಣೆ ಬಳಿಕ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕುರಿತಂತೆ ಕೆಲವೊಂದು ನಿಬಂಧನೆಗಳನ್ನು ಪೂರೈಸಿದರೆ ನಾಳೆ ಬಿಡುಗಡೆಯಾಗಬಹುದು ಇಲ್ಲದಿದ್ದರೆ ಶನಿವಾರ ಈ ಮೂವರು ಕೂಡ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!