Sunday, August 30, 2026
Homeಕರಾವಳಿಮಂಗಳೂರು: ದಿಢೀರ್ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ನದಿಯಲ್ಲಿ ಪತ್ತೆ!

ಮಂಗಳೂರು: ದಿಢೀರ್ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ನದಿಯಲ್ಲಿ ಪತ್ತೆ!

- Advertisement -
- Advertisement -

ಮಂಗಳೂರು:11 ವರ್ಷ ಪ್ರಾಯದ ಬಾಲಕಿಯೊಬ್ಬಳು ರವಿವಾರ ಬೆಳಗ್ಗೆ ಮನೆಯಿಂದ ದಿಢೀರ್ ನಾಪತ್ತೆಯಾಗಿದ್ದು, ಇದೀಗ ಆಕೆಯ ಮೃತದೇಹವು ಮನೆ ಸಮೀಪದ ನದಿಯಲ್ಲಿ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ.

ಮೃತಪಟ್ಟವರನ್ನು ಕುದ್ರೋಳಿಯ ಹೈದರಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಮಗಳು ಮುಫೀದಾ(11) ಎಂದು ಹೇಳಲಾಗಿದೆ. ಈಕೆ ರವಿವಾರ ಬೆಳಗ್ಗೆ ಸುಮಾರು ಗಂಟೆ ಮನೆಯಿಂದ ದಿಢೀರ್ ಕಾಣೆಯಾಗಿದ್ದು, ಸುತ್ತ ಮುತ್ತ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.

ಹೀಗಾಗಿ ಮನೆ ಸಮೀಪವಿದ್ದ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಮನೆಯಿಂದ ಸುಮಾರು 200 ಮೀ. ದೂರದಲ್ಲಿರುವ ನದಿ ಕಡೆಗೆ ಬಾಲಕಿ ಮುಫೀದಾ ತೆರಳುತ್ತಿರುವುದು ಕಂಡುಬಂದಿತ್ತು.ಅದರಂತೆ ಸ್ಥಳೀಯರು ಕುದ್ರೋಳಿಯ ಕಾರ್ಖಾನೆ ಬಳಿಯ ನದಿಯಲ್ಲಿ ಶೋಧ ನಡೆಸಿದಾಗ ಮುಫೀದಾಳ ಮೃತದೇಹ ಪತ್ತೆಯಾಗಿದೆ.

ಈಕೆ ಸ್ವಲ್ಪ ಬುದ್ಧಿಮಾಂದ್ಯತೆ ಹೊಂದಿದ್ದಾಳೆ ಎನ್ನಲಾಗಿದೆ. ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!