Monday, June 8, 2026
Homeಇತರಕಾರ್ಕಳ: ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ...! ನಾಲ್ಕು ಮನೆಗಳ ವಿದ್ಯುತ್ ವಯರಿಂಗ್ ಸಹಿತ ಬೆಲೆಬಾಳುವ ಪರಿಕರಗಳು ಸುಟ್ಟು...

ಕಾರ್ಕಳ: ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ…! ನಾಲ್ಕು ಮನೆಗಳ ವಿದ್ಯುತ್ ವಯರಿಂಗ್ ಸಹಿತ ಬೆಲೆಬಾಳುವ ಪರಿಕರಗಳು ಸುಟ್ಟು ನಷ್ಟ…!

- Advertisement -
- Advertisement -

ಕಾರ್ಕಳ: ವಿದ್ಯುತ್ ಸರಬರಾಜುನಲ್ಲಿ ಉಂಟಾದ ವ್ಯತ್ಯಯದಿಂದಾಗಿ ತೆಳ್ಳಾರಿನ ಬೆದ್ರಪಲ್ಕೆ ಪರಿಸರದಲ್ಲಿ ವಿದ್ಯುತ್ ಪರಿವರ್ತಕದಲ್ಲಿ ಏಕಾಏಕಿ ಭಾರೀ ಬೆಂಕಿ ಕಾಣಿಸಿ ಪರಿಸರದ ನಾಲ್ಕು ಮನೆಗಳ ವಿದ್ಯುತ್ ವಯರಿಂಗ್ ಸಹಿತ ಬೆಲೆಬಾಳುವ ಪರಿಕರಗಳು ಸುಟ್ಟು ನಷ್ಟಕ್ಕೊಳಗಾಗಿದೆ.

ತೆಳ್ಳಾರು ಬೆದ್ರಪಲ್ಕೆಯ ಮೋಹಿನಿ ಗೌಡ, ಗೋವಿಂದ ನಾಯ್ಕ, ಶಶಿಧರ ಶೆಟ್ಟಿ ಹಾಗೂ ಲಲಿತ ನಾಯ್ಕ ರವರ ವಿದ್ಯುತ್ ಸಂಬಂಧಿತ ಪರಿಕರಗಳಿಗೆ ಹಾನಿಯಾಗಿರುತ್ತದೆ. ಘಟನೆ ಸಂಭವಿಸಿದ ಮನೆಗಳಿಗೆ ದುರ್ಗ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್, ಸದಸ್ಯರಾದ ದೇವಕಿ, ಪ್ರಮೀಳಾ ಆಚಾರ್ಯ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್ ಪರಿವರ್ತಕ ಘಟಕದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು 4 ಮನೆಗಳ ವೈರಿಂಗ್ ಸುಟ್ಟು ಹೋಗಿದಲ್ಲದೇ ಟಿವಿ, ಫಿಡ್ಜ್, ಫ್ಯಾನ್, ಬಲ್ಬ್, ಟ್ಯೂಬ್‌ಗಳು ಸಹಿತ ಇತರ ವಸ್ತುಗಳು ಹಾನಿಯಾಗಿರುತ್ತದೆ.

- Advertisement -

Latest News

error: Content is protected !!