Sunday, June 7, 2026
Homeಕರಾವಳಿಐಪಿಎಲ್ ನಲ್ಲೂ ಹುಲಿ ಕುಣಿತದ ಹವಾ; ಮನಸೋ ಇಚ್ಛೆ ಕುಣಿದಾಡಿದ ಅಭಿಮಾನಿಗಳ ವಿಡಿಯೋ ವೈರಲ್!

ಐಪಿಎಲ್ ನಲ್ಲೂ ಹುಲಿ ಕುಣಿತದ ಹವಾ; ಮನಸೋ ಇಚ್ಛೆ ಕುಣಿದಾಡಿದ ಅಭಿಮಾನಿಗಳ ವಿಡಿಯೋ ವೈರಲ್!

- Advertisement -
- Advertisement -

ಮಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಐಪಿಎಲ್ ಪಂದ್ಯದ ಸಮಯದಲ್ಲಿ ಕರಾವಳಿಯ ಹುಲಿನೃತ್ಯದ ಹಾಡನ್ನು ಹಾಕಿರುವ ವಿಡಿಯೋ ಒಂದು ಸಖತ್ ವೈರಲ್ ಆಗಿದೆ.

ಐಪಿಎಲ್ ವೀಕ್ಷಿಸಲು ಶಾರ್ಜಾದ ಮೈದಾನಕ್ಕೆ ಬಂದಿದ್ದ ಕರಾವಳಿಯ ಆರ್ ಸಿಬಿ ಅಭಿಮಾನಿಗಳು ತಂಡವನ್ನು ಹುರಿದುಂಬಿಸುತ್ತಾ ಹುಲಿ ಕುಣಿತದ ಹಾಡಿಗೆ ಮನಸೋ ಇಚ್ಛೆ ಕುಣಿದಿದ್ದಾರೆ. ಯುವಕರು- ಯುವತಿಯರು ಸೇರಿದಂತೆ ಆರ್ ಸಿಬಿ ಅಭಿಮಾನಿಗಳು ಹುಲಿ ಕುಣಿತವಾಡಿದ ವಿಡಿಯೋ ವೈರಲ್ ಆಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು 6 ವಿಕೆಟ್ಗಳಿಂದ ಸೋಲಿಸಿದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆಟ ಪ್ರದರ್ಶಿಸಿ ಅಂಕಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಮರಳಿದೆ.

- Advertisement -

Latest News

error: Content is protected !!