Tuesday, June 9, 2026
Homeಕರಾವಳಿಬೆಳ್ತಂಗಡಿ: ಕೊಡಂಗೆ ಪ್ರದೇಶದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ; ಮನೆಯಂಗಳದಲ್ಲಿ ಕಟ್ಟಿ ಹಾಕಿದ್ದ ನಾಯಿ ಮೇಲೆ...

ಬೆಳ್ತಂಗಡಿ: ಕೊಡಂಗೆ ಪ್ರದೇಶದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ; ಮನೆಯಂಗಳದಲ್ಲಿ ಕಟ್ಟಿ ಹಾಕಿದ್ದ ನಾಯಿ ಮೇಲೆ ದಾಳಿ !

- Advertisement -
- Advertisement -

ಬೆಳ್ತಂಗಡಿ: ಇಲ್ಲಿಯ ಕೊಡಂಗೆ ಮಂಜುನಾಥ ಎಂಬವರ ಮನೆಯ ಅಂಗಳಕ್ಕೆ ಬಂದ ಚಿರತೆ ಮನೆಯಂಗಳದಲ್ಲಿ ಕಟ್ಟಿ ಹಾಕಿದ್ದ ನಾಯಿಗಳ ಮೇಲೆ ದಾಳಿ ನಡೆಸಿದ್ದು, ಒಂದು ನಾಯಿಯನ್ನು ಕೊಂದು ಅರ್ಧ ತಿಂದು ಬಿಟ್ಟು ಹೋದ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಮನೆಯವರು ಮನೆಯೊಳಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹೆಜ್ಜೆ ಗುರುತು ನೋಡಿ ಮನೆಯ ಅಂಗಳಕ್ಕೆ ಬಂದು ನಾಯಿಯನ್ನು ಕೊಂದದ್ದು ಚಿರತೆಯೇ ಎಂಬ ಎಂಬ ಶಂಕೆ ಮೂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

- Advertisement -

Latest News

error: Content is protected !!