Tuesday, June 9, 2026
Homeಕರಾವಳಿಬಂಟ್ವಾಳ: ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ...!

ಬಂಟ್ವಾಳ: ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ…!

- Advertisement -
- Advertisement -

ಬಂಟ್ವಾಳ: ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಯೋರ್ವ ಕಾಣೆಯಾಗಿರುವ ಬಗ್ಗೆ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಜಿಪ ಮುನ್ನೂರು ಗ್ರಾಮದ ನಂದಾವರ ನಿವಾಸಿ ಅಬ್ದುಲ್ ಬಶೀರ್ ರವರ ಮಗ ಹಿದಾಯತುಲ್ಲಾ (30) ಕಾಣೆಯಾದ ವ್ಯಕ್ತಿ.

ಹಿದಾಯತುಲ್ಲಾ ಅವರು ಪುತ್ತೂರಿನ ರಾಜಧಾನಿ ಚಿನ್ನದ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಸೆ. 13 ರಂದು ಸಜಿಪ ಮುನ್ನೂರು ಗ್ರಾಮದ ನಂದಾವರದ ತನ್ನ ಮನೆಯಿಂದ ಕೆಲಸಕ್ಕೆಂದು ಹೊರಟು ಹೋದವನು ವಾಪಾಸು ಮನೆಗೆ ಬಾರದೇ ಇದ್ದು, ಸೆ. 13ರಂದು ರಾತ್ರಿ 8.00 ಗಂಟೆಯ ಬಳಿಕ ಯಾರ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುತ್ತಾನೆ.

ಈ ಬಗ್ಗೆ ಪುತ್ತೂರಿನ ರಾಜಧಾನಿ ಜ್ಯುವೆಲ್ಲರ್ಸ್ ಗೆ ಹೋಗಿ ವಿಚಾರಿಸಿದ ಸಂದರ್ಭದಲ್ಲಿ ಸುಮಾರು ಜನರು ಬಂದು ಹಿದಾಯತುಲ್ಲನು ಹಲವರಿಂದ ಹಣ ಪಡೆದು ವಾಪಾಸು ನೀಡದಿರುವ ವಿಚಾರ ತಿಳಿದು ಬಂದಿದ ಹಾಗೂ ಯಾರೊಂದಿಗೆ ಎಷ್ಟು ಎಷ್ಟು ಹಣದ ವ್ಯವಹಾರ ಮಾಡಿದ್ದಾನೆ ಎಂಬ ಬಗ್ಗೆ, ನಮಗೆ ಗೊತ್ತಿಲ್ಲ ಎಂದು ಅವರು ತಿಳಿಸಿರುವ ಬಗ್ಗೆ ಅವರ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಮಗನನ್ನು ಪತ್ತೆ ಮಾಡಿಕೊಡುವಂತೆ ಅವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!