Saturday, June 13, 2026
Homeಕರಾವಳಿಪುತ್ತೂರಿನ ಮುಸ್ಲಿಂ ಯುವತಿಯನ್ನು ಭೇಟಿಯಾಗಲು ಬಂದ ರಾಯಚೂರಿನ ಹಿಂದೂ ಯುವಕ; ಲಾಡ್ಜ್ ಬುಕ್ ಮಾಡಲು ತೆರಳಿದವರನ್ನು...

ಪುತ್ತೂರಿನ ಮುಸ್ಲಿಂ ಯುವತಿಯನ್ನು ಭೇಟಿಯಾಗಲು ಬಂದ ರಾಯಚೂರಿನ ಹಿಂದೂ ಯುವಕ; ಲಾಡ್ಜ್ ಬುಕ್ ಮಾಡಲು ತೆರಳಿದವರನ್ನು ತರಾಟೆಗೆ ತೆಗೆದುಕೊಂಡ ಮುಸ್ಲಿಂ ಯುವಕರು!

- Advertisement -
- Advertisement -

ಪುತ್ತೂರು: ಹೊರಜಿಲ್ಲೆಯ ಹಿಂದೂ ಯುವಕರೊಂದಿಗೆ ಮುಸ್ಲಿಂ ಯುವತಿ ಪತ್ತೆಯಾದ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರು ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಹಿಂದೂ ಯುವಕ, ಪುತ್ತೂರು ಮೂಲದ ಮುಸ್ಲಿಂ ಯುವತಿ ಮತ್ತು ಹಿಂದೂ ಯುವತಿ ಜೊತೆ ಪುತ್ತೂರಿನ ಹಿಂದೂಸ್ತಾನ್ ಲಾಡ್ಜ್ ನಲ್ಲಿ ರೂಮ್ ಬುಕ್ ಮಾಡಲು ತೆರಳಿದ್ದು, ಈ ಬಗ್ಗೆ ತಿಳಿದ ಮುಸ್ಲಿಂ ಯುವಕರು ಹಿಂದೂ ಯುವಕರನ್ನು ತರಾಟೆಗೆ ತೆಗೆದುಕೊಂಡು ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ರಾಯಚೂರು ಮೂಲದ ಯುವಕ ಇನ್ಸ್ಟ್ರಾಗ್ರಾಂ ಮೂಲಕ ಪರಿಚಯವಾದ ಪುತ್ತೂರಿನ ಯುವತಿಯನ್ನು ಭೇಟಿಯಾಗಲು ತನ್ನ ಸ್ನೇಹಿತನ ಜೊತೆ ಬಸ್ ನಿಲ್ದಾಣಕ್ಕೆ ಬರುತ್ತಾನೆ.ಬಂದ ಯುವಕ ಯುವತಿಯನ್ನು ಸಂಪರ್ಕಿಸಿದಾಗ ಯುವತಿಯೊಂದಿಗೆ ಆಕೆಯ ಸ್ನೇಹಿತರಿಬ್ಬರು ಇರುತ್ತಾರೆ. ಬಳಿಕ ಅವರು ಬಸ್‌ನಿಲ್ದಾಣದಲ್ಲೇ ಇರುವ ವಸತಿ ಗೃಹಕ್ಕೆ ಹೋಗುತ್ತಿರುವ ಮಾಹಿತಿ ಅರಿತ ತಂಡವೊಂದು ಅವರನ್ನು ಪ್ರಶ್ನಿಸಿದ್ದು ಬಳಿಕ ಮಾತಿನ ಚಕಮಕಿಯಿಂದ ತುಸು ಗೊಂದಲ ಉಂಟಾಗಿತ್ತು.

ಸ್ಥಳದಲ್ಲಿ ಬಿಗುವಿನ ಸ್ಥಳೀಯರು ಅವರನ್ನು ಆಟೋ ಮೂಲಕ ಪೊಲೀಸ್ ಠಾಣೆಗೆ ಹೋಗಲು ತಿಳಿಸಿದ್ದು, ಸದ್ಯ ಆ ಇಬ್ಬರು ಯುವಕರು ಹಾಗೂ ಯುವತಿ ಪುತ್ತೂರು ನಗರ ಠಾಣೆಯಲ್ಲಿದ್ದಾರೆ . ಠಾಣೆಗೆ ಯುವತಿಯ ತಂದೆ ಕೂಡ ಆಗಮಿಸಿದ್ದು ಪೊಲೀಸರ ಜತೆ ಮಾತುಕತೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಆ ಇಬ್ಬರು ಯುವಕರು ಹಲ್ಲೆ ನಡೆದ ಬಗ್ಗೆ ಠಾಣೆಗೆ ದೂರು ನೀಡಿಲ್ಲ ಹಾಗೂ ಇತ್ತಂಡಗಳಿಂದಲೂ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.

- Advertisement -

Latest News

error: Content is protected !!