- Advertisement -
- Advertisement -
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕಾಶಿಬೆಟ್ಟು ಸಮೀಪ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಕಾರು ಚಲಿಸಿ ಪಲ್ಟಿಯಾಗಿದೆ. ರಸ್ತೆ ಬದಿಯ ಹುಲ್ಲು ಸ್ವಚ್ಛ ಗೊಳಿಸಿ ಮಣ್ಣು ಹಾಕಲಾಗಿದ್ದು ಮಳೆ ಬರುತ್ತಿದ್ದರಿಂದ ಮಣ್ಣಿನಲ್ಲಿ ಕಾರು ಜಾರಿಕೊಂಡು ಹೋಗಿ ಅವಘಡ ಸಂಭವಿಸಿರಬಹುದು ಎಂದು ತಿಳಿದು ಬಂದಿದೆ.
ಅಪಘಾತ ಸಂಭವಿಸಿದ ತಕ್ಷಣ ರಿಕ್ಷಾ ಚಾಲಕರೊಬ್ಬರು ಕಾರಿನಲ್ಲಿದ್ದವರನ್ನು ತನ್ನ ರಿಕ್ಷಾದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಕಾರಿನಲ್ಲಿ ಒಬ್ಬರೇ ಇದ್ದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.ಸದ್ಯ ಅಪಾಯದಿಂದ ಪಾರಾಗಿದ್ದಾರೆ.
- Advertisement -