Monday, June 8, 2026
Homeತಾಜಾ ಸುದ್ದಿಬಾಲಕಿಯ ಹೊಟ್ಟೆಯಲ್ಲಿತ್ತು ಬರೋಬ್ಬರಿ ಅರ್ಧ ಕೆಜಿ ಕೂದಲು: ಶಸ್ತ್ರಚಿಕಿತ್ಸೆ ಮೂಲಕ ಕೂದಲು ಹೊರ ತೆಗೆದ...

ಬಾಲಕಿಯ ಹೊಟ್ಟೆಯಲ್ಲಿತ್ತು ಬರೋಬ್ಬರಿ ಅರ್ಧ ಕೆಜಿ ಕೂದಲು: ಶಸ್ತ್ರಚಿಕಿತ್ಸೆ ಮೂಲಕ ಕೂದಲು ಹೊರ ತೆಗೆದ ವೈದ್ಯರು

- Advertisement -
- Advertisement -

ಮಹಾರಾಷ್ಟ್ರ:  ಕೂದಲು ತಿನ್ನುವ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳ ಹೊಟ್ಟೆಯಿಂದ ವೈದ್ಯರ ಬರೋಬ್ಬರಿ ಅರ್ಧ ಕೆಜಿ ಕೂದಲು ಹೊರ ತೆಗೆದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಕಲ್ಯಾಣದ ನಿವಾಸಿಯಾಗಿರುವ 12 ವರ್ಷದ ಬಾಲಕಿ ಶ್ರೀಲಕ್ಷ್ಮಿ ಕನೋಜಿಯಾ ಹೊಟ್ಟೆಯಿಂದ ಸುಮಾರು 650 ಗ್ರಾಂ ಕೂದಲನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ. ಈ ಪರಿಯ ಕೂದಲು ಹೊಟ್ಟೆಯಲ್ಲಿ ಜೀರ್ಣವಾಗದೇ ಇರುವುದನ್ನು ಕಂಡು ವೈದ್ಯರೇ ಅಚ್ಚರಿಪಟ್ಟುಕೊಂಡಿದ್ದಾರೆ.

ಬಾಲಕಿಗೆ ಎರಡು ವರ್ಷದ ಮಗುವಾಗಿದ್ದಾಗಿನಿಂದಲೂ ಕೂದಲನ್ನು ತಿನ್ನುವ ಚಟವಿತ್ತು. ಈ ಚಟವನ್ನು ಬಿಡಿಸಲು ಪಾಲಕರು ಯತ್ನಿಸಿದ್ದರು. ಆದರೆ ಆಕೆ ಕೇಳುತ್ತಿರಲಿಲ್ಲ. ಇದರಿಂದ ಯಾವುದೇ ಅನಾರೋಗ್ಯ ಸಮಸ್ಯೆ ಆಗಿಲ್ಲದ್ದನ್ನು ಗಮನಿಸಿದ್ದ ಪಾಲಕರೂ ದೊಡ್ಡವಳಾದ ಮೇಲೆ ಸರಿಯಾಗುತ್ತದೆ ಎಂದು ಸುಮ್ಮನಾಗಿದ್ದರು. ಆದರೆ ಈಚೆಗೆ ಬಾಲಕಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಕೂದಲು ಕಾಣಿಸಿಕೊಂಡಿದ್ದು, ಆಕೆಯ ಕರುಳಿನಲ್ಲಿ ಸಿಲುಕಿತ್ತು. ಇದೇ ಕಾರಣದಿಂದ ಆಕೆಗೆ ಎರಡು ತಿಂಗಳಿಂದ ಸರಿಯಾಗಿ ಆಹಾರ ಸೇವನೆ ಮಾಡಲು ಸಾಧ್ಯವಾಗದೇ ಸಮಸ್ಯೆ ಉಂಟಾಗಿತ್ತು. ಈ ಆಪರೇಷನ್ ಮಾಡಿ ಕೂದಲನ್ನು ಹೊರತೆಗೆದಿದ್ದಾರೆ.

- Advertisement -

Latest News

error: Content is protected !!