- Advertisement -
- Advertisement -
ಮಂಗಳೂರು: ಲಾರಿ ಹಾಗೂ ಸ್ಕೂಟರ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ಬಿಕರ್ನಕಟ್ಟೆ ಸಮೀಪ ನಡೆದಿದೆ. ಉಳಾಯಿಬೆಟ್ಟು ನಿವಾಸಿ, ಬಸ್ ಚಾಲಕ ದಯಾನಂದ್ (35) ಮೃತ ದುರ್ದೈವಿ.

ದಯಾನಂದ್ ಅವರು ಕೆಲಸ ಮುಗಿಸಿ ನಂತೂರಿನಿಂದ ವಾಮಂಜೂರು ಕಡೆಗೆ ತೆರಳುತ್ತಿರುವಾಗ ಬಿಕರ್ನಕಟ್ಟೆ ಜಂಕ್ಷನ್ ನಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರ ಮೇಲೆ ಲಾರಿ ಹರಿದಿದೆ. ಇದರಿಂದಾಗಿ ಸ್ಕೂಟರ್ ಸವಾರನ ದೇಹ ಛಿದ್ರವಾಗಿದೆ.
ಅಪಘಾತದ ನಂತರ ಲಾರಿಯೊಂದಿಗೆ ಚಾಲಕ ಪರಾರಿಯಾಗಿದ್ದು, ಸಾರ್ವಜನಿಕರು ಕೈಕಂಬ ಬಳಿ ತಡೆದು ಹಿಡಿದಿದ್ದಾರೆ. ಲಾರಿಯನ್ನು ಚಾಲಕ ಸಹಿತ ವಶಕ್ಕೆ ಪಡೆಯಲಾಗಿದ್ದು, ಘಟನಾ ಸ್ಥಳಕ್ಕೆ ನಗರ ಪೂರ್ವ (ಕದ್ರಿ) ಸಂಚಾರ ಠಾಣೆ ಪೊಲೀಸರು ತೆರಳಿ, ಪರಿಶೀಲನೆ ನಡೆಸಿದ್ದಾರೆ.
- Advertisement -