Wednesday, June 3, 2026
Homeಕರಾವಳಿಚಲಿಸುತ್ತಿದ್ದ ಆಟೋದ ಮೇಲೆ ಬಿದ್ದ ಹಲಸಿನ ಹಣ್ಣು: ಚಾಲಕನಿಗೆ ಗಂಭೀರ ಗಾಯ

ಚಲಿಸುತ್ತಿದ್ದ ಆಟೋದ ಮೇಲೆ ಬಿದ್ದ ಹಲಸಿನ ಹಣ್ಣು: ಚಾಲಕನಿಗೆ ಗಂಭೀರ ಗಾಯ

- Advertisement -
- Advertisement -

ಕೇರಳ: ಚಲಿಸುತ್ತಿದ್ದ ಆಟೋದ ಮೇಲೆ ಹಲಸಿನ ಹಣ್ಣು ಬಿದ್ದು ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಇಲ್ಲಿನ ಕಾಪಿಕ್ಕಾಡ್ ನಿವಾಸಿಯಾದ 55 ವರ್ಷದ ಸುದರ್ಶನ್ ಎಂಬವರು ರಿಕ್ಷಾ ಓಡಿಸಿ ಜೀವನ ನಡೆಸುತ್ತಿದ್ದರು. ಅದರೆ ಹಲಸಿನಹಣ್ಣೊಂದು ಅವರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ಸುದರ್ಶನ್ ಅವರು ಆಟೋ ಓಡಿಸುತ್ತಿದ್ದಾಗ ರಸ್ತೆ ಪಕ್ಕದಲ್ಲಿದ್ದ ಮರದಿಂದ ಹಲಸಿನ ಹಣ್ಣೊಂದು ರಭಸವಾಗಿ ಬಂದು ಸುದರ್ಶನ್ ಅವರ ಮೇಲೆ ಬಿದ್ದಿದೆ. ಕೂಡಲೇ ನಿಯಂತ್ರಣ ಕಳೆದುಕೊಂಡ ಸುದರ್ಶನ್ ಅವರು ಆಯ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ರಸ್ತೆಗೆ ಬಿದ್ದದ್ದರಿಂದ ಸುದರ್ಶನ್ ಅವರ ತಲೆಗೆ ಗಂಭೀರ ಗಾಯವಾಗಿದೆ. ಇನ್ನು ಘಟನೆ ವೇಳೆ ರಿಕ್ಷಾದಲ್ಲಿ ಯಾರೂ ಪ್ರಯಾಣಿಕರು ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!