Saturday, June 6, 2026
Homeಕರಾವಳಿಸೋನು ಸೂದ್‌ ಚಾರಿಟೇಬಲ್‌ ಫೌಂಡೇಶನ್‌ ವತಿಯಿಂದ ಉಳ್ಳಾಲದಲ್ಲಿ ಆಮ್ಲಜನಕ ಘಟಕ ಸ್ಥಾಪನೆ!!

ಸೋನು ಸೂದ್‌ ಚಾರಿಟೇಬಲ್‌ ಫೌಂಡೇಶನ್‌ ವತಿಯಿಂದ ಉಳ್ಳಾಲದಲ್ಲಿ ಆಮ್ಲಜನಕ ಘಟಕ ಸ್ಥಾಪನೆ!!

- Advertisement -
- Advertisement -

ಉಳ್ಳಾಲ: ಉಳ್ಳಾಲ ಆರೋಗ್ಯ ಕೇಂದ್ರದಲ್ಲಿ ಸುಮಾರು 76.88 ಲಕ್ಷ ರೂ ವೆಚ್ಚದಲ್ಲಿ ಆಮ್ಲಜನಕ ಘಟಕ ಸ್ಥಾಪಿಸಲು ನಟ ಸೋನುಸೂದ್‌ ಅವರ ನೇತೃತ್ವದ ಸೋನು ಸೂದ್‌ ಚಾರಿಟೇಬಲ್‌ ಫೌಂಡೇಶನ್‌ ಮುಂದಾಗಿದ್ದು,ಮಾಸಾಂತ್ಯದಲ್ಲಿ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಲಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಸೋನು ಸೂದ್‌ ನಮ್ಮ ಮುಂದಿನ ಆಕ್ಸಿಜನ್‌ ಘಟಕ ಉಳ್ಳಾಲದಲ್ಲಿ ಸ್ಥಾಪನೆಯಾಗಲಿದ್ದು ಈ ವಾರದಲ್ಲಿ ಘಟಕವನ್ನು ಸ್ಥಾಪನೆ ಮಾಡುವ ಕಾರ್ಯ ನಡೆಯಲಿದೆ ಎಂದಿದ್ದಾರೆ.

ಸೋನು ಸೂದ್‌ ಚಾರಿಟೇಬಲ್‌ ಫೌಂಡೇಶನ್‌ನಿಂದ ಕಳೆದ ಜೂನ್‌ನಲ್ಲಿ ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ರ್ಯಾಪಿಡ್‌ ಆಕ್ಸಿಜನ್‌ ಸೆಂಟರ್‌ ತೆರೆಯುವಾಗ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ಫೌಂಡೇಶನ್‌ನ ಮುಖ್ಯಸ್ಥರೊಂದಿಗೆ ಜಿಲ್ಲೆಯಲ್ಲಿ ಆಮ್ಲಜನಕ ಘಟಕದ ಅಗತ್ಯತೆಯ ಕುರಿತು ಮನವರಿಕೆ ಮಾಡಿದ್ದರು.ಮನವಿಗೆ ಸ್ಪಂದಿಸಿದ ಸೋನು ಸೂದ್ ಚಾರಿಟೇಬಲ್ ಫೌಂಡೇಶನ್‌ ಘಟಕ ಸ್ಥಾಪನೆಯ ನಿರ್ಮಾಣಕ್ಕೆ ಮುಂದಾಗಿದೆ.

- Advertisement -

Latest News

error: Content is protected !!