Friday, June 5, 2026
Homeಅಪರಾಧಬೆಳ್ತಂಗಡಿಯ ಸುಲ್ಕೇರಿಯಲ್ಲಿ 2 ವರ್ಷದ ಮಗು‌ ನಾಪತ್ತೆ

ಬೆಳ್ತಂಗಡಿಯ ಸುಲ್ಕೇರಿಯಲ್ಲಿ 2 ವರ್ಷದ ಮಗು‌ ನಾಪತ್ತೆ

- Advertisement -
- Advertisement -

ಬೆಳ್ತಂಗಡಿ : ತಾಯಿ ಮತ್ತು ಅಜ್ಜಿ ತೋಟಕ್ಕೆ ಹೋಗಿದ್ದಾಗ ಅಜ್ಜನ ಜೊತೆ ಬಿಟ್ಟು ಹೋಗಿದ್ದ ಎರಡು ವರ್ಷದ ಹೆಣ್ಣು ಮಗು ಏಕಾಏಕಿ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಸುಲ್ಕೇರಿಯ ಜಂತಿಗೋಳಿಯ ಬಳಿ ನಡೆದಿದೆ.

ತಾಯಿ ಮನೆಗೆ ಬರುವಾಗ ಅಜ್ಜ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದರು ಬಳಿಕ ಮನೆ ಮಂದಿ ಬಂದು ಎಲ್ಲಾ ಕಡೆ ಹುಡುಕಾಟ ನಡೆಸುತ್ತಿದ್ದಾರೆ ಸ್ಥಳಕ್ಕೆ ವೇಣೂರು ಪೊಲೀಸರು ದೌಡಾಯಿಸಿದ್ದಾರೆ‌. ಪಕ್ಕದಲ್ಲೇ ಹೊಳೆ ಕೂಡ ಇದ್ದು ಆಟ ಆಡುಕೊಂಡಿದ್ದು ಅಜ್ಜನಿಗೆ ಕಿವಿ ಕೇಳುತ್ತಿಲ್ಲ, ಮಗು ನೀರಲ್ಲಿ ಹೋಗಿರುವಾ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯರು ಹಾಗೂ ಮನೆಮಂದಿ ಮಗುವಿಗಾಗಿ ಎಲ್ಲಾ ಕಡೆ ಹುಡುಕಾಟದಲ್ಲಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.

- Advertisement -

Latest News

error: Content is protected !!