Sunday, July 6, 2025
Homeಕರಾವಳಿಮಂಗಳೂರಿನ ಮುಡಿಪಿನಲ್ಲಿ ಬೈಕ್ ಸವಾರನ ಮೇಲೆ ಚಲಿಸಿದ ಬಸ್: ಬೈಕ್ ಸವಾರ ಸ್ಥಳದಲ್ಲೇ ಸಾವು

ಮಂಗಳೂರಿನ ಮುಡಿಪಿನಲ್ಲಿ ಬೈಕ್ ಸವಾರನ ಮೇಲೆ ಚಲಿಸಿದ ಬಸ್: ಬೈಕ್ ಸವಾರ ಸ್ಥಳದಲ್ಲೇ ಸಾವು

spot_img
- Advertisement -
- Advertisement -

ಮಂಗಳೂರು : ಸ್ಕೂಟರ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಬಸ್ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಣಾಜೆಯ ಮುಡಿಪು ಬಳಿ ನಿನ್ನೆ ರಾತ್ರಿ ಸಂಭವಿಸಿದೆ.

ಮೃತನನ್ನು ಉಪ್ಪಳ ಮೂಲದ ಜೌಹಾರ್ (20) ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿಯಾಗಿದ್ದು, ಮುಡಿಪು ಸಮೀಪದ ಸಂಬಂಧಿಕರ ಮನೆಗೆಂದು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಬಾಳೆಪುಣಿ ಕಡೆಯಿಂದ ಮುಡಿಪು ಕಡೆಗೆ ಹೋಗುತ್ತಿದ್ದ ವೇಳೆ ಮುಡಿಪು ಪೆಟ್ರೋಲ್ ಪಂಪು ಬಳಿ ಅಪಘಾತ ಸಂಭವಿಸಿದೆ. ಸ್ಕೂಟರ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾಗಿ ಸ್ಕೂಟರ್ ಸವಾರ ಫುಟ್ ಪಾತ್ ಗೆ ಎಸೆಯಲ್ಪಟ್ಟರೆ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟ ಕಾರಣ ಅದೇ ವೇಳೆ ಬಂದ ಬಸ್ ನಡಿಗೆ ಬಿದ್ದು ಸವಾರ ಕೊನೆಯುಸಿರೆಳೆದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!