Tuesday, June 9, 2026
Homeತಾಜಾ ಸುದ್ದಿಪಬ್ ಜಿ ವ್ಯಾಮೋಹ : ತಾಯಿಯ ಖಾತೆಯಿಂದ 1 ಲಕ್ಷ ರೂ. ಎಗರಿಸಿದ ಮಕ್ಕಳು !

ಪಬ್ ಜಿ ವ್ಯಾಮೋಹ : ತಾಯಿಯ ಖಾತೆಯಿಂದ 1 ಲಕ್ಷ ರೂ. ಎಗರಿಸಿದ ಮಕ್ಕಳು !

- Advertisement -
- Advertisement -

ಕೋಝಿಕೋಡ್: ಪಬ್ ಜಿ ಆಟಕ್ಕೆ ಇಬ್ಬರು ಮಕ್ಕಳು ತಮ್ಮ ತಾಯಿಯ ಖಾತೆಯಿಂದ 1 ಲಕ್ಷ ರೂ ಬಳಸಿಕೊಂಡಿರುವ ಘಟನೆ ಕೋಝಿಕೋಡ್ ನಲ್ಲಿ ನಡೆದಿದೆ.

ಕೋಝಿಕೋಡ್‌ನ ಮಹಿಳೆಯೊಬ್ಬರು ತನ್ನ ಖಾತೆಯಿಂದ 1 ಲಕ್ಷ ರೂ ಕಳುವಾಗಿದೆ ಎಂದು ಸೈಬರ್ ಕ್ರೈಮ್ ಗೆ ದೂರು ನೀಡಿದ್ದು, ಸೈಬರ್ ಕ್ರೈಮ್ ಪೊಲೀಸರು ಸಾಕ್ಷ್ಯಗಳ ಜಾಡು ಹಿಡಿಯುತ್ತಾರೆ. ಒಂಬತ್ತನೇ ಮತ್ತು ಹತ್ತನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಮಕ್ಕಳು ಇನ್ನೊಬ್ಬ ವಿದ್ಯಾರ್ಥಿಯ ಬೆಂಬಲದೊಂದಿಗೆ, ಈ ಹಣವನ್ನು ಆನ್‌ಲೈನ್ ಆಟಕ್ಕಾಗಿ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮಕ್ಕಳ ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಆನ್‌ಲೈನ್ ತರಗತಿಗಳ ಕಾರಣದಿಂದಾಗಿ ಮಕ್ಕಳಿಗೆ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ ಗಳನ್ನು ಖರೀದಿಸಿದ್ದರು.ಮಕ್ಕಳು ನಿಷೇಧಿತ ಪಬ್ ಜಿ ಆಟವನ್ನು ಆಡಿದ್ದು, ಆಟದ ಹೊಸ ಹಂತಗಳನ್ನು ತಲುಪಲು ಅವರಿಗೆ ಹಣದ ಅಗತ್ಯವಿತ್ತು.

ಈ ಕಾರಣಕ್ಕಾಗಿ ಮಕ್ಕಳು ತಾಯಿಯ ಖಾತೆಯಿಂದ ಹಣವನ್ನು ತೆಗೆದಿದ್ದು, ತಾಯಿಯ ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಮತ್ತು ಇತರ ಮಾಹಿತಿಗಳು ತಿಳಿದಿದ್ದರಿಂದ ಖಾತೆಯಿಂದ ಹಣ ತೆಗೆಯಲು ಸುಲಭವಾಯಿತು ಎನ್ನಲಾಗಿದೆ.

ಸೈಬರ್ ಸೆಲ್ ಇನ್ಸ್‌ಪೆಕ್ಟರ್ ಪಿ.ರಾಜೇಶ್, ದೂರಿನ ತನಿಖೆ ನಡೆಸಿದ್ದು, ಘಟನೆ ಬೆಳಕಿಗೆ ಬಂದಿದೆ.

- Advertisement -

Latest News

error: Content is protected !!