Sunday, June 7, 2026
Homeಕೊಡಗುಮಡಿಕೇರಿ ಸಮೀಪ ಬರೆ ಕುಸಿತ: ಆರು ಮನೆಗಳಿಗೆ ಸಂಪರ್ಕ ಕಡಿತ

ಮಡಿಕೇರಿ ಸಮೀಪ ಬರೆ ಕುಸಿತ: ಆರು ಮನೆಗಳಿಗೆ ಸಂಪರ್ಕ ಕಡಿತ

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಡಿಕೇರಿ‌ ನಗರದ ಸಮೀಪ‌ ಬರೆ ಕುಸಿತವಾಗಿದೆ. ಮಂಗಳೂರು ರಸ್ತೆಯಲ್ಲಿರುವ ತಾಳತ್ ಮನೆ ಗ್ರಾಮದಲ್ಲಿ ಘಟನೆ ನಡೆದಿದೆ.‌ ಬರೆ ಕುಸಿತದಿಂದಾಗಿ ಗ್ರಾಮದ ಸುಮಾರು ಆರು ಮನೆಗಳಿಗೆ ಸಂಪರ್ಕ‌ ಕಡಿತಗೊಂಡಿದೆ. ಸದ್ಯಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲವಾದರೂ ಇದರಿಂದಾಗಿ ಆರು ಮನೆಗಳು ಅಪಾಯದಲ್ಲಿದ್ದು, ಮನೆಗಳ ನಿವಾಸಿಗಳು ಆತಂಕದಲ್ಲಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಮಹೇಶ್ ಭೇಟಿ ನೀಡಿದ್ದು ನಿವಾಸಿಗಳ ಸ್ಥಳಾಂತರಕ್ಕೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ. ಬರೆ ಕುಸಿದು ಸಂಪರ್ಕ ಕಡಿತಗೊಂಡಿರುವ ಕಾರಣ ಮನೆಗೆ ತೆರಳಲಾಗದೇ ಸಂತ್ರಸ್ಥರು ಪರದಾಡುವಂತಾಗಿದೆ. ಜೊತೆಗೆ ಬೆಳಗ್ಗೆಯಿಂದ ಕೊಡಗು ಜಿಲ್ಲೆಯಲ್ಲಿ ಮಳೆ, ಗಾಳಿ ಅಬ್ಬರಿಸುತ್ತಿರುವ ಕಾರಣ ಜನ ಆತಂಕಗೊಳ್ಳುವಂತಾಗಿದೆ.

- Advertisement -

Latest News

error: Content is protected !!