Wednesday, June 3, 2026
Homeತಾಜಾ ಸುದ್ದಿಹಿಂದಕ್ಕೆ ಚಲಿಸಿದ ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದ ವಾಹನ : ಆರು ಜನ ಕೆಲಸಗಾರರಿಗೆ ಗಾಯ

ಹಿಂದಕ್ಕೆ ಚಲಿಸಿದ ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದ ವಾಹನ : ಆರು ಜನ ಕೆಲಸಗಾರರಿಗೆ ಗಾಯ

- Advertisement -
- Advertisement -

ಚಿಕ್ಕಮಗಳೂರು:  ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿದ್ದ ವಾಹನ ಹಿಂದಕ್ಕೆ ಚಲಿಸಿ ಮೇಲಿಂದ ಕೆಳಗೆ ಬಿದ್ದು ಆರು ಕಾರ್ಮಿಕರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..

ತೋಟದ ಒಳಗೆ ವಾಹನ ಚಲಿಸುವಾಗ ಗೇರ್ ಬದಲಿಸಲು ಹೋಗಿ ನ್ಯೂಟ್ರೋಲ್ ಆಗಿ ಮೇಲಿಂದ ಕೆಳಗೆ ಜಾರಿ ಹಿಂದಕ್ಕೆ ಚಲಿಸಿದೆ. ಪರಿಣಾಮ ವಾಹನದಲ್ಲಿದ್ದ ಕಾರ್ಮಿಕರಾದ  ಜಯ, ಸುಶೀಲ, ಕಲಾವತಿ, ಮಾಲಿನಿ, ಪುಟ್ಟಮ್ಮ, ಸುಶೀಲ ಎಂಬವರು ಗಾಯಗೊಂಡಿದ್ದಾರೆ. ಕೂಡಲೇ ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಗಂಭೀರ ಗಾಯಗೊಂಡಿರುವ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

Latest News

error: Content is protected !!