Friday, June 5, 2026
Homeಕರಾವಳಿಉಡುಪಿಉಡುಪಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದಂಗಡಿಯಿಂದ ಚಿನ್ನಾಭರಣ ಕದ್ದ ಮಹಿಳೆ : 2 ತಿಂಗಳ ಬಳಿಕ...

ಉಡುಪಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದಂಗಡಿಯಿಂದ ಚಿನ್ನಾಭರಣ ಕದ್ದ ಮಹಿಳೆ : 2 ತಿಂಗಳ ಬಳಿಕ ಬೆಳಕಿಗೆ ಬಂತು ಪ್ರಕರಣ

- Advertisement -
- Advertisement -

ಉಡುಪಿ: ಗ್ರಾಹಕರ ಸೋಗಿನಲ್ಲಿ  ಜ್ಯುವೆಲ್ಲರಿ ಅಂಗಡಿಗೆ ಬಂದ ಮಹಿಳೆಯೊಬ್ಬರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ನಗರದ ಕನಕದಾಸ ರಸ್ತೆಯಲ್ಲಿರುವ ಯು.ಮಹೇಶ್ ಶೇಟ್ ಎಂಬವರ ರಾಜಶ್ರೀ ಜುವೆಲ್ಲರ್ಸ್‌ಗೆ ಮಾ.17ರಂದು 40 ರಿಂದ 45 ವರ್ಷ ಪ್ರಾಯದ ಓರ್ವ ಮಹಿಳಾ ಗ್ರಾಹಕಿಯು ಅಂಗಡಿಯ ಟೇಬಲ್ ಮೇಲೆ ಇಟ್ಟಿದ್ದ 16 ಗ್ರಾಂ ತೂಕದ 2 ಬಳೆಗಳು ಹಾಗೂ 4 ಗ್ರಾಂ ತೂಕದ ಒಂದು ಚಿನ್ನದ ತುಂಡನ್ನು ಕಳವು ಮಾಡಿ ಕೊಂಡು ಹೋಗಿದ್ದಾರೆ.

ಮೊನ್ನೆ ಅಂಗಡಿಯಲ್ಲಿನ ಸಿಸಿ ಕ್ಯಾಮರಾ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕಳವಾದ ಸೊತ್ತುಗಳ ಮೌಲ್ಯ 1,00,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

- Advertisement -

Latest News

error: Content is protected !!