Friday, June 5, 2026
Homeಕರಾವಳಿಮಂಗಳೂರು: ಶ್ರೀನಿವಾಸ್‌ ಶಿಕ್ಷಣ ಸಂಸ್ಥೆ ವತಿಯಿಂದ ಆನ್ ಲೈನ್ ಅಡುಗೆ ಸ್ಪರ್ಧೆ

ಮಂಗಳೂರು: ಶ್ರೀನಿವಾಸ್‌ ಶಿಕ್ಷಣ ಸಂಸ್ಥೆ ವತಿಯಿಂದ ಆನ್ ಲೈನ್ ಅಡುಗೆ ಸ್ಪರ್ಧೆ

- Advertisement -
- Advertisement -

ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್‌ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್‌ನ ಶ್ರೀನಿವಾಸ ಯೂನಿವರ್ಸಿಟಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ & ಟೂರಿಸಂನ ವತಿಯಿಂದ ಭವಿಷ್ಯದ ಬಾಣಸಿಗ(Chef)ರಾಗಲು ಬಯಸುವ ದ್ವಿತೀಯ ಪಿಯುಸಿ ಹಾಗೂ 10+2 ವಿದ್ಯಾರ್ಥಿಗಳಿಗೆ ಆನ್ಲೈನ್ ವೇದಿಕೆಯ ಮೂಲಕ ಅಡುಗೆ ಸ್ಪರ್ಧೆಯನ್ನು ಜುಲೈ 10ರ ಶನಿವಾರದಂದು ಆಯೋಜಿಸಲಾಗುತ್ತಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಉಪಾಹಾರ ಮತ್ತು ಅದಕ್ಕೆ ಸಂಬಂಧಿಸಿದ ಭಕ್ಷ್ಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗೆಯೆ ಇದರಲ್ಲಿ ಭಾಗವಹಿಸುವವರು ಸ್ಪರ್ಧೆಯ ದಿನದಂದು ತಯಾರಿಸಿ ಮತ್ತು ಪ್ರದರ್ಶಿಸಬೇಕು ಎಂದು ಕಾಲೇಜಿನ ಡೀನ್‌ ಪ್ರೊ. ಸ್ವಾಮಿನಾಥನ್‌ ಪ್ರಕಟಣೆಯಲ್ಲಿ ತಿಳಿಸಿದರು.

ಸ್ಪರ್ಧೆಗೆ ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ಚಿತ್ರದಲ್ಲಿ ನೀಡಿರುವ ನಂಬರ್ ಗೆ ಕರೆ ಮಾಡಿ ರಿಜಿಸ್ಟರ್ ಮಾಡಿಕೊಳ್ಳಬಹುದು.

- Advertisement -

Latest News

error: Content is protected !!