Thursday, June 4, 2026
Homeಕರಾವಳಿತಂದೆ ಅಂತ್ಯಸಂಸ್ಕಾರಕ್ಕೆ ಹೂ ತರಲು ತೆರಳಿದ್ದ ಮಗನೂ ಅಪಘಾತಕ್ಕೆ ಬಲಿ

ತಂದೆ ಅಂತ್ಯಸಂಸ್ಕಾರಕ್ಕೆ ಹೂ ತರಲು ತೆರಳಿದ್ದ ಮಗನೂ ಅಪಘಾತಕ್ಕೆ ಬಲಿ

- Advertisement -
- Advertisement -

ಶಿರಸಿ: ಇಂದು ಬೆಳಗ್ಗೆ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರಕ್ಕೆ ಹೂ ತರಲೆಂದು ಮಾರುಕಟ್ಟೆಗೆ ತೆರಳಿದ್ದ ಪುತ್ರ ವಾಹನ ಅಪಘಾತಕ್ಕೆ ಬಲಿಯಾದ ಘಟನೆ ಶಿರಸಿ ನಗರದ ಎಸ್.ಬಿ.ಐ. ಸರ್ಕಲ್ ಬಳಿ ನಡೆದಿದೆ.

ನಗರದ ಎಸ್.ಬಿ.ಐ. ಸರ್ಕಲ್ ಬಳಿ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಇದರಿಂದ ಬೈಕ್‍ನಲ್ಲಿದ್ದ ಇಬ್ಬರು ರಸ್ತೆಗೆಸೆಯಲ್ಪಟ್ಟು, ಬಸ್ಸಿನ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಅಡಿಗೆ ಸಿಲುಕಿದ ಬೈಕ್ ಸಹ ನುಜ್ಜುಗುಜ್ಜಾಗಿದೆ

ಶಿರಸಿಯ ಗಣೇಶ ನಗರದ ರವಿಚಂದ್ರ ವಡ್ಡರ್ (34) ಹಾಗೂ ಸುನೀಲ ಇಂದೂರ (26) ಎಂದು ಗುರುತಿಸಲಾಗಿದೆ.

ರವಿಚಂದ್ರ ತಂದೆ ಹನುಮಂತಪ್ಪ ಇಂದು ಬೆಳಗ್ಗಿನ ಜಾವ ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕೆ ಹೂವು ತರಲು ಹೋದಾಗ ಘಟನೆ ಜರುಗಿದೆ. ಸ್ಥಳಕ್ಕೆ ಡಿವೈಎಸ್‍ಪಿ ರವಿ ನಾಯ್ಕ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!