Monday, June 8, 2026
Homeತಾಜಾ ಸುದ್ದಿರಸ್ತೆಯ ತಪ್ಪು ಬದಿಯಲ್ಲಿ ವಾಹನ ಚಾಲನೆ ಮಾಡಿದರೆ ಹುಷಾರ್!. ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದ್ರೆ ಆರು...

ರಸ್ತೆಯ ತಪ್ಪು ಬದಿಯಲ್ಲಿ ವಾಹನ ಚಾಲನೆ ಮಾಡಿದರೆ ಹುಷಾರ್!. ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದ್ರೆ ಆರು ತಿಂಗಳವರೆಗೂ ಜೈಲು ಶಿಕ್ಷೆ

- Advertisement -
- Advertisement -

ಮುಂಬೈ :ಈಗಾಗಲೇ ಜನವರಿ 4ದಿಂದ ಜಾರಿಗೆ ಬಂದಿರುವ ಹೊಸ ನಿಯಮಾವಳಿಗಳ ಅಡಿಯಲ್ಲಿ ರಸ್ತೆಯ ತಪ್ಪು ಬದಿಯಲ್ಲಿ ವಾಹನ ಚಾಲನೆ ಮಾಡುವ ಸವಾರರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.ಹಳೆ ಉಲ್ಲಂಘನೆಗಳಿಗೆ ಪಾವತಿ ಮಾಡಬೇಕಿದ್ದ ದಂಡ ಬಾಕಿ ಉಳಿಸಿಕೊಂಡಿರುವ 4,200 ಮಂದಿ ಸವಾರರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗಿದೆ.

ಇನ್ನು ಮುಂದೆ ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ, ರ‍್ಯಾಶ್ ಡ್ರೈವಿಂಗ್, ತಪ್ಪು ಬದಿಯಲ್ಲಿ ವಾಹನ ಚಾಲನೆ ಸೇರಿದಂತೆ ಸಂಚಾರಿ ನಿಯಮಗಳ ಗಂಭೀರ ಉಲ್ಲಂಘನೆ ಮಾಡುವ ಮಂದಿಗೆ ಆರು ತಿಂಗಳವರೆಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.ಈ ನಿಯಮದಡಿಯಲ್ಲಿ ಮುಂಬೈ ಪೊಲೀಸರು 155 ಸವಾರರ ಮೇಲೆ ಕ್ರಮ ಜರುಗಿಸಿದ್ದಾರೆ. ಇದಲ್ಲದೆ ಐಪಿಸಿಯ 279ನೇ ವಿಧಿ ಅಡಿ ಆರೋಪಪಟ್ಟಿ ಸಿದ್ಧಪಡಿಸಿದ್ದಾರೆ.

- Advertisement -

Latest News

error: Content is protected !!