Friday, June 5, 2026
Homeತಾಜಾ ಸುದ್ದಿಕರ್ತವ್ಯನಿರತ 'ಲೇಡಿ ಕಾನ್ಸ್ ಸ್ಟೇಬಲ್' ಮೇಲೆ ಕಾಂಗ್ರೆಸ್‌ ಶಾಸಕಿ 'ಸೌಮ್ಯ ರೆಡ್ಡಿ'ಯಿಂದ ಹಲ್ಲೆ..!

ಕರ್ತವ್ಯನಿರತ ‘ಲೇಡಿ ಕಾನ್ಸ್ ಸ್ಟೇಬಲ್’ ಮೇಲೆ ಕಾಂಗ್ರೆಸ್‌ ಶಾಸಕಿ ‘ಸೌಮ್ಯ ರೆಡ್ಡಿ’ಯಿಂದ ಹಲ್ಲೆ..!

- Advertisement -
- Advertisement -

ಬೆಂಗಳೂರು: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್ ಇಂದು ನಗರದಲ್ಲಿ ರಾಜಭವನ್ ಚಲೋ ರ್ಯಾಲಿ ನಡೆಸುತ್ತಿದೆ. ರ್ಯಾಲಿಯ ನಡುವೆ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಕರ್ತವ್ಯನಿರತ ಮಹಿಳಾ ಪೊಲೀಸ್ ಮೇಲೆ ಕೈ ಮಾಡಿದ ಘಟನೆ ನಡೆದಿದೆ.

ಕಾಂಗ್ರೆಸ್ ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಹತ್ತಿಕ್ಕಲು ಮುಂದಾದ ಪೊಲೀಸರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಾಮಲಿಂಗಾರೆಡ್ದಿ, ಈಶ್ವರ ಖಂಡ್ರೆ ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀರು ರಾಜಭವನ ಚಲೋ ತಡೆಯುತ್ತಿದ್ದಂತೆಯೇ ರೊಚ್ಚಿಗೆದ್ದ ಶಾಸಕಿ ಸೌಮ್ಯ ರೆಡ್ಡಿ ಲೇಡಿ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ ಎನ್ನಲಾಗಿದೆ.

- Advertisement -

Latest News

error: Content is protected !!