Thursday, June 4, 2026
Homeಕರಾವಳಿಕಾರ್ಕಳದಲ್ಲಿ ಸ್ಕೂಟರ್ ಗೆ ಬೈಕ್ ಡಿಕ್ಕಿ: ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಸಾವು

ಕಾರ್ಕಳದಲ್ಲಿ ಸ್ಕೂಟರ್ ಗೆ ಬೈಕ್ ಡಿಕ್ಕಿ: ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಸಾವು

- Advertisement -
- Advertisement -

ಕಾರ್ಕಳ: ಸ್ಕೂಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ನೀಚಾಲಿನ ಸಾಂತೂರು ಎಂಬಲ್ಲಿ ನಡೆದಿದೆ. ಮೃತ ಸ್ಕೂಟರ್ ಸವಾರನನ್ನು ಶ್ರೀಕಾಂತ ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ 7.45ರ ಸುಮಾರಿಗೆ ಸ್ಕೂಟರ್‌ನಲ್ಲಿ ಶ್ರೀಕಾಂತ್ ಹಾಗೂ ಸಹ ಸವಾರ ರವೀಂದ್ರ ಪೂಜಾರಿ ಅವರು ಬೆಳ್ಮಣ್‌ನಿಂದ ಸಾಂತೂರಿಗೆ ಹೋಗಲು ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದರು. ಈ ವೇಳೆ ನೀಚಾಲುವಿನ ಸಾಂತೂರು ಕಡೆಗೆ ಹೋಗಲು ತಿರುವು ತೆಗೆದುಕೊಳ್ಳುತ್ತಿರುವ ಸಂದರ್ಭ ಪಡುಬಿದ್ರೆ ಕಡೆಯಿಂದ ಅತಿ ವೇಗವಾಗಿ  ಬಂದ ಬೈಕ್ ಸ್ಕೂಟರ್‌ನ ಎಡಬದಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಸ್ಕೂಟರ್‌ ಸಮೇತ ಶ್ರೀಕಾಂತ ಹಾಗೂ ರವೀಂದ್ರ ಪೂಜಾರಿ ಅವರು ರಸ್ತೆಗೆ ಬಿದ್ದಿದ್ದು, ಶ್ರೀಕಾಂತ ಅವರಿಗೆ ತಲೆಗೆ ಹಾಗೂ ರವಿಂದ್ರ ಪೂಜಾರಿ ಅವರ ಎಡ ಕಾಲು ಮೂಳೆ ಮುರಿದಿದೆ. ಕೂಡಲೇ ಗಾಯಾಳುಗಳನ್ನು ಉಡುಪಿ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆ ಶ್ರೀಕಾಂತ ಅವರು ಚಿಕತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ

- Advertisement -

Latest News

error: Content is protected !!