Thursday, June 4, 2026
Homeತಾಜಾ ಸುದ್ದಿಗ್ರಾಮಸ್ಥರ ಖಾತೆಗೆ ಯಾವೂದೋ ಮೂಲದಿಂದ ಹಣ ಜಮಾ!.. ಹಣ ಡ್ರಾ ಮಾಡುವುದರಲ್ಲಿ ಮಗ್ನರಾದ ಜನರು

ಗ್ರಾಮಸ್ಥರ ಖಾತೆಗೆ ಯಾವೂದೋ ಮೂಲದಿಂದ ಹಣ ಜಮಾ!.. ಹಣ ಡ್ರಾ ಮಾಡುವುದರಲ್ಲಿ ಮಗ್ನರಾದ ಜನರು

- Advertisement -
- Advertisement -

ವಿಜಯನಗರಂ: ಇಲ್ಲಿನ ಸಲೂರು ಮಂಡಲದ ಶಿವರಾಂಪುರಂನ ಕೆಲವು ಗ್ರಾಮಸ್ಥರ ಖಾತೆಗೆ ಯಾವೂದೋ ಮೂಲದಿಂದ ಹಣ ಜಮಾ ಆಗಿದೆ.ಸುಮಾರು 13,000 ರೂಪಾಯಿಯಿಂದ ಹಿಡಿದು 15,000 ರೂಪಾಯಿವರೆಗಿನ ಹಣವನ್ನ ಈ ಗ್ರಾಮದ ಸುಮಾರು 200 ಮಂದಿಯ ಖಾತೆಗೆ ಜಮಾ ಮಾಡಲಾಯ್ತು. ಗ್ರಾಮಸ್ಥರು ಈ ಹಣವನ್ನು ಬಳಸಿಕೊಂಡಿದ್ದಾರೆ.

ಯಾವುದೇ ಸರ್ಕಾರಿ ಯೋಜನೆಗೆ ಸಂಬಂಧಿಸಿರದ ಈ ಹಣ ಬಂದಿದ್ದು ಎಲ್ಲಿಂದ ಎಂಬುದು ಪ್ರಶ್ನೆ.ಕೆಲವು ಉದಾಹರಣೆಯಲ್ಲಿ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಸದಸ್ಯರ ಖಾತೆಗೆ ಹಣ ಜಮಾ ಆಗಿದೆ.ಸಧ್ಯ ಈ ವಿಚಾರ ಬೆಳಕಿಗೆ ಬಂದಿದ್ದು ಈ ಕುರಿತು ತನಿಖೆಯಾಗುತ್ತಿದ್ದು ಬ್ಯಾಂಕ್​ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!