Thursday, June 4, 2026
Homeತಾಜಾ ಸುದ್ದಿಹಕ್ಕಿ ಜ್ವರದ ಎಫೆಕ್ಟ್​: ಬಾಯ್ಲರ್​ ಕೋಳಿ ಕೆಜಿಗೆ 15 ರೂ.!

ಹಕ್ಕಿ ಜ್ವರದ ಎಫೆಕ್ಟ್​: ಬಾಯ್ಲರ್​ ಕೋಳಿ ಕೆಜಿಗೆ 15 ರೂ.!

- Advertisement -
- Advertisement -

ನವದೆಹಲಿ: ಕೋವಿಡ್ ಅಪಾಯ ತೀವ್ರ ಮಟ್ಟದಲ್ಲಿ ಇರುವ ಹೊತ್ತಲ್ಲೇ ಜಗತ್ತಿಗೆ ಹಕ್ಕಿ ಜ್ವರ ಕಾಡತೊಡಗಿದೆ. ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ ಹಕ್ಕಿಜ್ವರ ಕಾಣಿಸಿದೆ. ಎಚ್ಚರವಿರಲಿ, ಈ ರೋಗಕ್ಕೆ ಮದ್ದಿಲ್ಲ, ಲಸಿಕೆ ಇಲ್ಲ. ಭಾರತದಲ್ಲೂ ಅನೇಕ ರಾಜ್ಯಗಳಲ್ಲಿ ಹಕ್ಕಿ ಜ್ವರ ವ್ಯಾಪಿಸಿದೆ.

ಕೇರಳ, ಹರಿಯಾಣ ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಬರ್ಡ್ ಫ್ಲೂ ಪ್ರಕರಣಗಳು ಬೆಳಕಿಗೆ ಬಂದಿವೆ. ಕರ್ನಾಟಕದಲ್ಲೂ ಹಲವು ಪಕ್ಷಿಗಳು ಸಾವನ್ನಪ್ಪಿದ್ದು ಅವೂ ಕೂಡ ಹಕ್ಕಿ ಜ್ವರ ಪ್ರಕರಣಗಳಾ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ನೆರೆಯ ಕೇರಳದಲ್ಲಿ ರೋಗ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಸುಲಭವಾಗಿ ರೋಗ ಹರಡುವ ಸಾಧ್ಯತೆ ಇದೆ. ಹೀಗಾಗಿ, ರಾಜ್ಯದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.

ಹಕ್ಕಿ ಜ್ವರವು ಕೋಳಿ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರಿದ್ದು, ಬೆಲೆ ಕುಸಿತವಾಗಿ ಭಾರಿ ನಷ್ಟ ಅನುಭವಿಸುವಂತಾಗಿದೆ. ಚಿಕನ್​ ಅನ್ನು ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ಸೋಂಕು ಅಥವಾ ರೋಗ ಹರಡುವುದಿಲ್ಲ ಎಂದು ವೈದ್ಯರು ಹೇಳಿದರೂ ಹಕ್ಕಿ ಜ್ವರದ ಭೀತಿಯಿಂದ ಬಹುತೇಕರು ಚಿಕನ್​ ತಿನ್ನುವುದಕ್ಕೆ ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೋಳಿ ಮಾಂಸದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ.

ಹರಿಯಾಣದ ಜಿಂದ್​ ಜಿಲ್ಲೆ ಕೋಳಿ ಉದ್ಯಮದ ಕೇಂದ್ರವಾಗಿದೆ. ಮಾರಾಟಕ್ಕೆಂದು ಪ್ರತಿನಿತ್ಯ ಜಿಂದ್​ ಜಿಲ್ಲೆಯಿಂದ ದೆಹಲಿಗೆ 4 ಲಕ್ಷ ಕೋಳಿಗಳನ್ನು ರೈಲುಗಳಲ್ಲಿ ಸಾಗಿಸಲಾಗುತ್ತದೆ. ಆದರೆ, ಕೋಳಿ ಮಾಂಸವನ್ನು ತೆಗೆದುಕೊಳ್ಳುವವರ ಇಲ್ಲದಿರುವುದರಿಂದ ಬೆಲೆ ಕೆ.ಜಿ ಗೆ 15 ರೂಪಾಯಿಗೆ ಕುಸಿದಿದೆ. ಹಕ್ಕಿ ಜ್ವರದ ಭೀತಿ ಎದುರಾಗುವ ಮೊದಲು ಕೆ.ಜಿಗೆ 90 ರೂ.ನಂತೆ ದೆಹಲಿಯಲ್ಲಿ ಮಾರಾಟವಾಗುತ್ತಿತ್ತು.

- Advertisement -

Latest News

error: Content is protected !!