Saturday, June 6, 2026
Homeತಾಜಾ ಸುದ್ದಿಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಗೆ ಮಾತೃವಿಯೋಗ- ವರಲಕ್ಷ್ಮಿ ಗುಂಡೂರಾವ್ ಇನ್ನಿಲ್ಲ

ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಗೆ ಮಾತೃವಿಯೋಗ- ವರಲಕ್ಷ್ಮಿ ಗುಂಡೂರಾವ್ ಇನ್ನಿಲ್ಲ

- Advertisement -
- Advertisement -

ಬೆಂಗಳೂರು : ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರ ತಾಯಿ ವರಲಕ್ಷ್ಮಿ ಗುಂಡೂರಾವ್ ಅವರು ನಿಧನರಾಗಿದ್ದಾರೆ.ಅವರ ಅಂತ್ಯಕ್ರಿಯೆ ದೇವನಹಳ್ಳಿಯ ತೋಟದಲ್ಲಿ ಇಂದು ನಡೆಯಲಿದೆ. ಈಕೆ ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಅವರ ಪತ್ನಿ.ವರಲಕ್ಷ್ಮಿ ಗುಂಡೂರಾವ್ ಅವರು ಮೂವರು ಪುತ್ರರಾದ ದಿನೇಶ್ ಗುಂಡೂರಾವ್, ಮಹೇಶ್ ಗುಂಡೂರಾವ್ ಮತ್ತು ರಾಜೇಶ್ ಗುಂಡೂರಾವ್ ಅವರನ್ನು ಅಗಲಿದ್ದಾರೆ.

ವರಲಕ್ಷ್ಮಿ ಗುಂಡೂರಾವ್ ಅವರು ಪತಿಯ ನಿಧನದ ನಂತರ ರಾಜಕೀಯ ರಾಂಗ ದಲ್ಲಿ ಗುರುತಿಸಿಕೊಂಡಿದ್ದರು. ದಿ. ಗುಂಡೂರಾವ್ ಅವರು 1993ರ ಆಗಸ್ಟ್‌ನಲ್ಲಿ ರಕ್ತ ಕ್ಯಾನ್ಸರ್‌ನಿಂದ ನಿಧನರಾಗಿದ್ದರು.

- Advertisement -

Latest News

error: Content is protected !!