Sunday, June 7, 2026
Homeತಾಜಾ ಸುದ್ದಿಕೇವಲ 5 ದಿನಗಳಲ್ಲಿ 2 ಮದುವೆಯಾದ ಟೆಕ್ಕಿ: ಮದುವೆ ರಹಸ್ಯ ಬಯಲಾಗಿದ್ದೇ ಒಂದು ರೋಚಕ ಕಥೆ

ಕೇವಲ 5 ದಿನಗಳಲ್ಲಿ 2 ಮದುವೆಯಾದ ಟೆಕ್ಕಿ: ಮದುವೆ ರಹಸ್ಯ ಬಯಲಾಗಿದ್ದೇ ಒಂದು ರೋಚಕ ಕಥೆ

- Advertisement -
- Advertisement -

ಮಧ್ಯಪ್ರದೇಶ:  ಇಲ್ಲಿನ 26 ವರ್ಷದ ಸಾಫ್ಟ್​ವೇರ್​ ಇಂಜಿನಿಯರ್​ ಐದು ದಿನಗಳಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾಗಿ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಖಂದ್ವಾ ಮೂಲದ ಸಂತ್ರಸ್ತ ಮಹಿಳೆಯ ಕುಟುಂಬ ದಾಖಲಿಸಿರುವ ದೂರಿನ ಆಧಾರದ ಮೇಲೆ ಪೊಲೀಸರು ತನಖೆ ಆರಂಭಿಸಿದ್ದಾರೆ.

ಆರೋಪಿ ಇಂದೋರ್‌ ನಿವಾಸಿಯಾಗಿದ್ದು, ಈತ ಡಿಸೆಂಬರ್ 2ರಂದು ಖಾಂದ್ವಾದ ಮಹಿಳೆಯನ್ನು ಮತ್ತು ಡಿಸೆಂಬರ್ 7ರಂದು ಇಂದೋರ್‌ನ ಇನ್ನೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನ ಪ್ರಕಾರ ಆರೋಪಿಯ ಎರಡನೇ ಮದುವೆ ಊಟಕ್ಕೆ ಮೊದಲ ಪತ್ನಿಯ ಸಂಬಂಧಿಯೊಬ್ಬರು ಹೋಗಿದ್ದರು. ವರನನ್ನು ಗುರುತಿಸಿದ ಅವರು ಆರೋಪಿಯ ಎರಡನೇ ಮದುವೆಯ ಫೋಟೋಗಳನ್ನು ಮೊದಲನೇ ಪತ್ನಿಯ ಸಂಬಂಧಿಕರಿಗೆ ಕಳುಹಿಸಿದ್ದಾರೆ. ಇದರಿಂದ ಆತನ ಬಂಡವಾಳ ಬಯಲಾಗಿದೆ. ಮೊದಲನೇ ಪತ್ನಿಯ ಕುಟುಂಬವು ವರನಿಗೆ ₹10 ಲಕ್ಷ ಬೆಲೆಬಾಳುವ ವಸ್ತುವನ್ನು ನೀಡಿತ್ತು ಎನ್ನಲಾಗಿದೆ.

ಮೊದಲ ಪತ್ನಿ ಬಳಿ ತನಗೆ ಭೋಪಾಲ್​ನಲ್ಲಿ ಕೆಲಸವಿದೆ ಎಂದು ಹೇಳಿ ತೆರಳಿದ್ದ ಆರೋಪಿ ಎರಡನೇ ಮದುವೆಯಾಗಿದ್ದಾನೆ. ಎರಡನೇ ಮದುವೆಯನ್ನೂ ಸಹ ಆತನ ಇಷ್ಟದ ಪ್ರಕಾರವೇ ಆಗಿದ್ದು ಯಾವುದೇ ಬಲವಂತದಲ್ಲಿ ಆಗಿಲ್ಲ ಎಂದು ಎರಡನೇ ಪತ್ನಿಯ ಮನೆಯವರು ತಿಳಿಸಿದ್ದಾರೆ. ಮೊದಲ ಪತ್ನಿ ಸಂಬಂಧಿಕರಿಗೆ ವಿಚಾರ ತಿಳಿಯುತ್ತಿದ್ದಂತೆ ಪರಾರಿಯಾಗಿರುವ ಆಸಾಮಿ, ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

Latest News

error: Content is protected !!