Thursday, June 4, 2026
Homeತಾಜಾ ಸುದ್ದಿನಟಿ ಚೈತ್ರಾ ಆತ್ಮಹತ್ಯೆ ಪ್ರಕರಣ- ಪ್ರಚೋದನೆ ನೀಡಿದ ಪತಿಯ ಬಂಧನ!..

ನಟಿ ಚೈತ್ರಾ ಆತ್ಮಹತ್ಯೆ ಪ್ರಕರಣ- ಪ್ರಚೋದನೆ ನೀಡಿದ ಪತಿಯ ಬಂಧನ!..

- Advertisement -
- Advertisement -

ಚೆನ್ನೈ:ಕೆಲವು ದಿನಗಳ ಹಿಂದೆ ತಮಿಳುನಾಡಿನ ಸೀರಿಯಲ್ ನಟಿ ಚೈತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ಆಯಾಮ ದೊರೆತಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಚೈತ್ರಾ ಪತಿಯನ್ನು ಬಂಧಿಸಲಾಗಿದೆ.ಈ ಹಿಂದೆ ನಟಿಯ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟ ಕಾರಣ ಎಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ಹೇಳಿದ್ದರೂ, ಇದೀಗ ಚೈತ್ರಾ ಪತಿ ಹೇಮಂತ್ ಬಂಧನದ ಬಳಿಕ ಪ್ರಕರಣ ಬೇರೆಯೇ ತಿರುವು ಪಡೆದುಕೊಂಡಿದೆ.

ಚೈತ್ರಾ ಪತಿ ಹೇಮಂತ್ ಪತ್ನಿಗೆ ಹೊಡೆಯುತ್ತಿದ್ದ, ಇದೇ ಕಾರಣಕ್ಕೆ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಚೈತ್ರಾ ತಾಯಿ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ.ಹಾಗಾಗಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಡಿ ಹೇಮಂತ್ ರನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!