Thursday, August 27, 2026
Homeತಾಜಾ ಸುದ್ದಿಹೀಗೊಂದು ಅಚ್ಚರಿಯ ಘಟನೆ : ಒಂದು ಬಾವಿಗೆ ಕಾಲು ಜಾರಿ ಬಿದ್ದ ಮಹಿಳೆ ಮತ್ತೊಂದು ಬಾವಿಯಲ್ಲಿ...

ಹೀಗೊಂದು ಅಚ್ಚರಿಯ ಘಟನೆ : ಒಂದು ಬಾವಿಗೆ ಕಾಲು ಜಾರಿ ಬಿದ್ದ ಮಹಿಳೆ ಮತ್ತೊಂದು ಬಾವಿಯಲ್ಲಿ ಪತ್ತೆ

- Advertisement -
- Advertisement -

ಕೇರಳ :ಬಟ್ಟೆ ಒಗೆಯುತ್ತಿದ್ದ ವೇಳೆ ಕಾಲು ಜಾರಿ ಬಾವಿಯೊಂದಕ್ಕೆ ಬಿದ್ದ ಮಹಿಳೆ ಇನ್ನೊಂದು ಬಾವಿಯಲ್ಲಿ ಪತ್ತೆಯಾದ ಘಟನೆ ಕೇರಳದ  ಕಣ್ಣೂರಿನ ಇರಿಕ್ನೂರಲ್ಲಿ ನಡೆದಿದೆ.

ಉಮೇಬಾ(42) ಬಾವಿಗೆ ಬಿದ್ದ ಮಹಿಳೆ. ಇವರು ಇರಿಕೂರ್ ಆಯಿಪುಳದಲ್ಲಿ ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಅಚಾನಕ್ ಆಗಿ ಬಾವಿಗೆ ಬಿದ್ದಿದ್ದಾರೆ. ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಕೆಯ ರಕ್ಷಣೆಗೆ ತೆರಳಿದ್ದಾರೆ. ಆದರೆ ಮಹಿಳೆ ಮಾತ್ರ ಬಾವಿಯಲ್ಲಿ ಕಾಣಿಸಿರಲಿಲ್ಲ. ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಬಾವಿ 25 ಅಡಿ ಆಳವಿದೆ. ಬಾವಿಗೆ ಬಿದ್ದ ಮಹಿಳೆ ಕಾಣಿಸದೇ ಇದ್ದುದರಿಂದ ಕುಟುಂಬಸ್ಥರು ಗಾಬರಿಗೊಂಡಿದ್ದರು.

ಇತ್ತ ಮಹಿಳೆ ಬಾವಿಗೆ ಬಿದ್ದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಮಹಿಳೆ ಕಾಣಿಸದಿದ್ದಾಗ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವಷ್ಟರಲ್ಲಿ ಮಹಿಳೆಯನ್ನು ಸ್ಥಳೀಯರು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಸದ್ಯ ಆಕೆಯನ್ನು ಚಿಕಿತ್ಸೆಗಾಗಿ ಎಕೆಜಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವಿಶೇಷವೆಂದರೆ ಆಕೆ ಮಹಿಳೆ ಬಿದ್ದ ಬಾವಿಯಿಂದ ಭೂಗತವಾಗಿ ಗುಹೆಯೊಂದು ಹತ್ತಿರದ ಬಾವಿಗೆ ಸಂಪರ್ಕ ಹೊಂದಿತ್ತು. ಹೀಗಾಗಿ ಬಾವಿಗೆ ಬಿದ್ದ ಮಹಿಳೆ ಗುಹೆಯ ಮೂಲಕ ಇನ್ನೊಂದು ಬಾವಿಗೆ ಹೋಗಿ ಬಿದ್ದಿದ್ದಾರೆ.

- Advertisement -

Latest News

error: Content is protected !!