- Advertisement -
![]()
- Advertisement -
ತಿರುವನಂತಪುರಂ:ಇಲ್ಲಿನ ಕಣ್ಣೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಸೈನಿಕರೊಬ್ಬರಿಗೆ ಮಂಗನ ಕಾಯಿಲೆಯ ಲಕ್ಷಣಗಳೊಂದಿಗೆ ಅಪರೂಪದ ಮಲೇರಿಯಾ ಸೋಂಕು ಪತ್ತೆಯಾಗಿದೆ. ಪರಿಶೀಲನೆಯ ನಂತರ ಮಲೇರಿಯಾಕ್ಕೆ ಕಾರಣವಾಗುವ ಪರಾವಲಂಬಿ ಪ್ರೊಟೋಜೋವಾ ಎಂಬ ಅಪರೂಪದ ಪ್ರಭೇದವಾದ ಪ್ಲಾಸ್ಮೋಡಿಯಂ ಓವಲ್ ನಿಂದ ಆತ ಸೋಂಕಿಗೆ ಒಳಗಿದ್ದಾನೆ ಎಂದು ತಿಳಿದು ಬಂದಿದೆ.
ಸೂಡಾನ್ ನಿಂದ ಹಿಂದಿರುಗಿದ್ದ ಈತನಿಗೆ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಅಂಡಾಕಾರದ ಪರಾವಲಂಬಿಗಳು ಪ್ರಧಾನವಾಗಿ ಕೇಂದ್ರೀಕೃತವಾಗಿರುವ ಉಪ-ಸಹರಾ ಆಫ್ರಿಕನ್ ದೇಶದಲ್ಲಿ ಈ ಸೊಂಕು ಹೆಚ್ಚಾಗಿದೆ ಎನ್ನಲಾಗಿದೆ. ಇದು ಭಾರತಕ್ಕೆ ಪ್ರವೇಶಿಸಿದ್ದು ಆತಂಕ ಸೃಷ್ಟಿಸಿದೆ.
ಇದೇ ವೇಳೆ ಕೇರಳ ಆರೋಗ್ಯ ಸಚಿವರು ಚಿಕಿತ್ಸೆ,ಮುಂಜಾಗ್ರತಾ ಕ್ರಮಕೈಗೊಳ್ಳುವಮೂಲಕ ರೋಗ ಹರಡುವುದನ್ನು ತಪ್ಪಿಸಬಹುದು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ರೀತಿಯ ಮಲೇರಿಯಾ ಮಾರಣಾಂತಿಕವಲ್ಲ ಎನ್ನಲಾಗಿದೆ.
- Advertisement -


