Thursday, July 3, 2025
Homeಕರಾವಳಿಮಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿ ವಂಚನೆ - ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರ...

ಮಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿ ವಂಚನೆ – ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರ ಪಡೆದು 1.53 ಲಕ್ಷ ರೂ ಪಂಗನಾಮ!..

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಪಾಂಡೇಶ್ವರ ಹಾಗು ಮುಲ್ಕಿಯಲ್ಲಿ ಎರಡು ಬೇರೆ ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಇಬ್ಬರು ಖದೀಮರು ಜನರಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರವನ್ನು ಪಡೆದು 1.53 ಲಕ್ಷ ರೂ. ಹಣವನ್ನು ವಂಚಿಸಿದ್ದಾರೆ.

ಪಾಂಡೇಶ್ವರದ ವ್ಯಕ್ತಿಗೆ ಮೊಬೈಲ್‌ಗೆ ಕರೆ ಬಂದಿದ್ದು ಕರೆ ಮಾಡಿದ ವ್ಯಕ್ತಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಿಭಾಗದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಕಾರ್ಡ್‌ನ್ನು ಪುನಃ ಸಕ್ರಿಯಗೊಳಿಸಲು ಕ್ರೆಡಿಟ್ ಕಾರ್ಡ್ ಸಂಖ್ಯೆ, ಒಟಿಪಿ ಇತ್ಯಾದಿಗಳನ್ನು ನೀಡುವಂತೆ ಹೇಳಿದ್ದು ನೀಡಿದ ನಂತರ ಖಾತೆಯಿಂದ 80,000 ರೂ. ಕಡಿತಗೊಂಡಿದೆ.

ಮುಲ್ಕಿಯ ವ್ಯಕ್ತಿಯೊಬ್ಬರಿಗೆ ಕರೆ ಬಂದಿದ್ದು ತಾವು ಬ್ಯಾಂಕ್ ಆಫ್ ಬರೋಡಾದವರು. ವಿಜಯ ಬ್ಯಾಂಕ್ ಡೆಬಿಟ್ ಕಾರ್ಡ್ ಅನ್ನು ಬ್ಯಾಂಕ್ ಆಫ್ ಬರೋಡಾಕ್ಕೆ ವರ್ಗಾಯಿಸಲು ನಿಮ್ಮ ಕಾರ್ಡ್‌ ಮಾಹಿತಿ ನೀಡಿ ಎಂದು ಹೇಳಿಕೊಂಡು ಡೆಬಿಟ್ ಕಾರ್ಡ್ ಮತ್ತು ಸಿವಿವಿ ಸಂಖ್ಯೆ ಇತ್ಯಾದಿಗಳನ್ನು ಸಂಗ್ರಹಿಸಿ ಹಂತ ಹಂತವಾಗಿ 73,182 ರೂ. ಗಳನ್ನು ವಿತ್‌ಡ್ರಾ ಮಾಡಿದ್ದಾರೆ.ಈ ಬಗ್ಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

- Advertisement -
spot_img

Latest News

error: Content is protected !!