Wednesday, June 3, 2026
Homeತಾಜಾ ಸುದ್ದಿಡ್ರಗ್ಸ್ ದಂಧೆ ಬಯಲಿಗೆಳೆಯುವ ಶಂಕೆಯಿಂದ ಟಿವಿ ಪತ್ರಕರ್ತನ ಕೊಲೆ- ಕತ್ತು ಹಿಸುಕಿ ಕೊಲೆ ಮಾಡಿದ ದುಷ್ಕರ್ಮಿಗಳು!..

ಡ್ರಗ್ಸ್ ದಂಧೆ ಬಯಲಿಗೆಳೆಯುವ ಶಂಕೆಯಿಂದ ಟಿವಿ ಪತ್ರಕರ್ತನ ಕೊಲೆ- ಕತ್ತು ಹಿಸುಕಿ ಕೊಲೆ ಮಾಡಿದ ದುಷ್ಕರ್ಮಿಗಳು!..

- Advertisement -
- Advertisement -

ಚೆನ್ನೈ:ಇಲ್ಲಿನ ಕಾಂಚೀಪುರಂ ಜಿಲ್ಲೆಯಲ್ಲಿ ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುತ್ತಾನೆ ಎಂದು ಟಿವಿ ಪತ್ರಕರ್ತನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.ಇಸ್ರೇವೆಲ್ ಮೋಸೆಸ್ ಎಂಬ 27 ವರ್ಷದ ಪತ್ರಕರ್ತ ಡ್ರಗ್ ಡೀಲರ್‍ಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂಬ ಭಯದಲ್ಲಿ ದುಷ್ಕರ್ಮಿಗಳ ಗ್ಯಾಂಗ್ ಪತ್ರಕರ್ತನನ್ನು ಹತ್ಯೆ ಮಾಡಿದ್ದಾರೆ.

ಭಾನುವಾರ ಸಂಜೆ ಮನೆಯಲ್ಲಿದ್ದ ಮೋಸಸ್ ರನ್ನು ಕರೆ ಮಾಡಿ ಮನೆಯಿಂದ ಹೊರಗೆ ಬರುವಂತೆ ದುಷ್ಕರ್ಮಿಗಳು ತಿಳಿಸಿದ್ದಾರೆ. ಈ ವೇಳೆ ಹೊರಗೆ ಬಂದ ಮೋಸಸ್ ದುಷ್ಕರ್ಮಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.ಆತನನ್ನು ಐದು ಮಂದಿ ಹಿಡಿದಿದ್ದರು ಕುಟುಂಬಸ್ಥರು ಅವರನ್ನು ಗಮನಿಸಿದ್ದು ಮೋಸಸ್ ನ ಸ್ನೇಹಿತರು ಎಂದು ತಿಳಿದಿದ್ದರೂ. ಆದರೆ ನಂತರದಲ್ಲಿ 5ಜನ ಸೇರಿ ಕತ್ತು ಹಿಸುಕಿ ಕೊಲೆ ಗೈದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!