Saturday, June 6, 2026
Homeಕರಾವಳಿಉಡುಪಿಬರೋಬ್ಬರಿ 13 ವರ್ಷದ ಪ್ರೀತಿ: ಮದುವೆಯ ದಿನವೇ ಯುವತಿಗೆ ಕೈಕೊಟ್ಟ ಮಣಿಪಾಲದ ಯುವಕ

ಬರೋಬ್ಬರಿ 13 ವರ್ಷದ ಪ್ರೀತಿ: ಮದುವೆಯ ದಿನವೇ ಯುವತಿಗೆ ಕೈಕೊಟ್ಟ ಮಣಿಪಾಲದ ಯುವಕ

- Advertisement -
- Advertisement -

ಉಡುಪಿ: ಅವರಿಬ್ಬರದ್ದು ಬರೋಬ್ಬರಿ 13 ವರ್ಷದ ಪ್ರೀತಿ. ಅದೇ ಪ್ರೀತಿಗೆ ಮದುವೆ ಅನ್ನೋ ಸುಂದರ ಫ್ರೇಮ್ ಹಾಕೋದಕ್ಕೆ ಅವರಿಬ್ಬರು ಸಿದ್ಧರಾಗಿದ್ದರು. ಆದರೆ ಅದೇನಾಯ್ತೋ ಮದುವೆ ದಿನವೇ ಹುಡುಗ ಕೈ ಕೊಟ್ಟಿದ್ದಾನೆ.

ಯೆಸ್… ಇಂತಹದ್ದೊಂದು ಸ್ಯಾಡ್ ಎಂಡಿಂಗ್ ಲವ್ ಸ್ಟೋರಿ ನಡೆದಿರೋದು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ. ಇದು ಮಣಿಪಾಲದ ಮಮತಾ ಮತ್ತು ಪರ್ಕಳದ ಗಣೇಶ್ ಜೋಡಿಯದ್ದು ದಶಕಗಳ ಕಾಲದ ಪ್ರೇಮ ಕಥೆ. ಹ್ಯಾಂಗ್ಯೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ 13 ವರ್ಷದ ಹಿಂದೆ ಪ್ರೇಮಾಂಕುರವಾಗಿತ್ತು. ಈ ಅವಧಿಯಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕ ಸಹ ಬೆಳೆದಿದೆ. ಮದುವೆಯಾಗುವುದಾಗಿ ಯುವಕ ನಂಬಿಸಿ 13 ವರ್ಷಗಳ ಕಾಲ ದಿನಗಳನ್ನು ದೂಡಿದ್ದಾನೆ. ಎರಡು ಬಾರಿ ಅಬಾರ್ಷನ್ ಕೂಡಾ ಮಾಡಿಸಿದ್ದಾನೆ.

ನವೆಂಬರ್ 4ಕ್ಕೆ ಬೇರೆ ಹುಡುಗಿಯನ್ನು ಮದುವೆಯಾಗಲು ಮಹೂರ್ತ ಕೂಡ ಫಿಕ್ಸ್ ಮಾಡಿದ್ದಾನೆ. ಈ ವಿಚಾರ ಪ್ರೀತಿಸಿದ ಮಮತಾಳಿಗೆ ಗೊತ್ತಾಗಿ, ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರ ಮಧ್ಯಪ್ರವೇಶದ ನಂತರ ನವೆಂಬರ್ 6ಕ್ಕೆ ಪ್ರೀತಿಸಿದ ಮಮತಾಳನ್ನೇ ಮದುವೆಯಾಗುವುದಾಗಿ ಗಣೇಶ್ ಒಪ್ಪಿಕೊಂಡಿದ್ದಾನೆ. ಮದುವೆಯ ಸಂಭ್ರಮದಲ್ಲಿ ಯುವತಿಯ ಮನೆಯವರು ಎಲ್ಲ ಶಾಸ್ತ್ರಗಳನ್ನು ಮುಗಿಸಿದ್ದರು.

ಯುವತಿ ಖುಷಿಯಿಂದ ಕೈ ತುಂಬಾ ಮದರಂಗಿ ಹಾಕಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದಾಳೆ. ಆದರೆ ಯುವಕ ಕೈಕೊಟ್ಟು ಪರಾರಿಯಾಗಿದ್ದಾನೆ. ಆಕಾಶವೇ ಕುಸಿದು ಬಿದ್ದಂತಾದ ಯುವತಿ, ಆಕ್ರೋಶಗೊಂಡು ಯುವಕನ ಮನೆ, ಸಂಬಂಧಿಕರ ಮನೆಯನ್ನೆಲ್ಲ ಪ್ರಿಯಕರನನ್ನು ಜಾಲಾಡಿದ್ದಾಳೆ. ಯುವಕ ಒಂದು ದಿನ ಕಳೆದರೂ ಬರದಿದ್ದಾಗ ಆತನ ಮನೆಯ ಮುಂದೆ ಪ್ರತಿಭಟನೆ ಕೂತಿದ್ದಾಳೆ. ಜೀವನದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾಳೆ.

- Advertisement -

Latest News

error: Content is protected !!