Friday, June 5, 2026
Homeಕರಾವಳಿಸುಳ್ಯದ ವಸತಿಗೃಹದಲ್ಲಿ ಐವರ್ನಾಡಿನ ಯುವಕ- ಬೆಳ್ತಂಗಡಿಯ ಯುವತಿ ಆತ್ಮಹತ್ಯೆ

ಸುಳ್ಯದ ವಸತಿಗೃಹದಲ್ಲಿ ಐವರ್ನಾಡಿನ ಯುವಕ- ಬೆಳ್ತಂಗಡಿಯ ಯುವತಿ ಆತ್ಮಹತ್ಯೆ

- Advertisement -
- Advertisement -

ಸುಳ್ಯ: ಸುಳ್ಯ ನಗರದ ವಸತಿಗೃಹವೊಂದರಲ್ಲಿ ಯುವಕ ಹಾಗೂ ಯುವತಿಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಪುತ್ರ ದರ್ಶನ್ ಎಂದು ತಿಳಿದು ಬಂದಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದೆ .ಇನ್ನು ಆತ್ಮಹತ್ಯೆಗೆ ಶರಣಾಗಿರುವ ಯುವತಿಯನ್ನು ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ಸೇಸಪ್ಪರ ಮಗಳು ಇಂದಿರಾ ಎಂದು ಗುರುತಿಸಲಾಗಿದೆ.

ಅ. 18 ರಂದು ರಾತ್ರಿ ಸುಳ್ಯದ ಸರ್ದನ್ ವಸತಿಗೃಹಕ್ಕೆ ಬಂದು ಸಂಬಂಧಿಕರು ಎಂದು ಹೇಳಿ ಊರಿಗೆ ಹೋಗಲು ಬಸ್ಸು ಇಲ್ಲ ಎಂದು ಹೇಳಿ ಯುವತಿಯ ದಾಖಲೆ ನೀಡಿ ರೂಮ್ ಬುಕ್ ಮಾಡಿಕೊಂಡಿದ್ದ. ಅ. 19 ರಂದು ಮಧ್ಯಾಹ್ನ ವೇಳೆಗೆ ವಸತಿಗೃಹದ ಮೆನೆಜರ್ ರೂಮ್ ಬಳಿ ಹೋಗಿ ಕಿಟಕಿ ಬಳಿ ಬಂದು ಇಣುಕಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬಯಲಾಗಿದ್ದು ಒಂದೇ ನೇಣಿಗೆ ಇಬ್ಬರು ಕೊರಳೊಡ್ಡಿದ್ದಾರೆ ಎನ್ನಲಾಗಿದೆ.

ಆದರೆ ಯುವಕ ಹಾಗೂ ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!